Saturday, 30 December 2017

Raja Weds Rani Marriage First Day

ಎಲ್ಲರಿಗು ನಮಸ್ಕಾರ,

ನಾಳೆ ನಮ್ಮ ಏರಿಯಾದಲ್ಲಿ ರಾಜ ರಾಣಿಯನ್ನು ಮದುವೆಯಾಗುವ ಮೂಲಕ ಹೊಸ ವರ್ಷವನ್ನು ಆಚರಿಸುತ್ತಿದ್ದೇವೆ ಇಂದು ಪ್ರಥಮ ದಿನದ ಶಾಸ್ತ್ರ ಮುಗಿದಿದೆ ಮತ್ತು ಅದರ ಕೆಲ ಚಿತ್ರಪಟಗಳನ್ನು ಶೇರ್ ಮಾಡುತ್ತಿದ್ದ್ದೇನೆ, ನಾಳೆ ಮುಹೂರ್ತ ಸಮಾರಂಭ ಸಂಜೆ 8 ಘಂಟೆಗೆ ದಯವಿಟ್ಟು ಎಲ್ಲರು ಬಂದು ಆಗಮಿಸಿ ವಧು ವರರಿಗೆ ಆಶೀರ್ವದಿಸಬೇಕಾಗಿ ಕೋರಲಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ,
9964979899






Sunday, 19 November 2017

write review

ಎಲ್ಲರಿಗು ನಮಸ್ಕಾರ,

ಶುಕ್ರವಾರ  ಬಿಡುಗಡೆಯಾದ  "9 ಹಿಲ್ಟನ್ ಹೌಸ್"  "ಕಾಲೇಜು ಕುಮಾರ್" "ಪಾನಿಪುರಿ " "ಸಂಯುಕ್ತ 2" "ಉಪೇಂದ್ರ ಮತ್ತೆ ಬಾ" ಸಿನಿಮಾ ಬಗ್ಗೆ ಅಭಿಪ್ರಾಯ ಅಥವಾ ರಿವ್ಯೂ ಬರೆಯಬೇಕೆನಿಸಿದರೆ ಕೆಳಕಂಡ ಲಿಂಕ್ ಗಳನ್ನೂ  ಅನ್ನು ಫಾಲೋ ಮಾಡಿ.

9 ಹಿಲ್ಟನ್ ಹೌಸ್
http://cinetalenters.com/#/now-showing/113

ಕಾಲೇಜು ಕುಮಾರ
http://cinetalenters.com/#/now-showing/109

ಪಾನಿಪುರಿ
http://cinetalenters.com/#/now-showing/111

ಸಂಯುಕ್ತ 2
http://cinetalenters.com/#/now-showing/112

ಉಪೇಂದ್ರ ಮತ್ತೆ ಬಾ
http://cinetalenters.com/#/now-showing/110


ನಿಮ್ಮ ಅಭಿಪ್ರಾಯಗಳನ್ನೂ ಬರೆದು ಕನ್ನಡ ಹೊಸಬರ ಕನ್ನಡ ಚಿತ್ರವನ್ನು ಪ್ರೋತ್ಸಹಿಸಬೇಕಾಗಿ ವಿನಂತಿ.

ನೀವು ಯಾವುದಾದರು ಹೊಸ ಸಿನಿಮಾ ತಂಡದವರಾಗಿದ್ದರೆ, ನಿಮಗೂ ನಿಮ್ಮ ಸಿನಿಮಾ ತಂಡದ ಬಗ್ಗೆ ಜನರ ಅಭಿಪ್ರಾಯ ತಿಳಿದುಕೊಳ್ಳುವ ಅಸೆ ಇದ್ದರೇ 99 64 97 98 99 ಅನ್ನು ಸಂಪರ್ಕಿಸಲು ಕೋರಿದೆ.

ಇದನ್ನು ದಯವಿಟ್ಟು ಶೇರ್ ಮಾಡಿ, ಹೊಸಬರ ಈ ಪ್ರಯತ್ನವನ್ನು ಬೆಂಬಲಿಸಿ, ಹರಸಿ ಮತ್ತು ಆಶೀರ್ವದಿಸಿ.

ಇಂತಿ,
Ashoka cinetalenters
99 64 97 98 99

Friday, 17 November 2017

Illa kannada movie review

Name : Ashoka Cinetalenters
Contact No : 9964979899
Message : 

ಎಲ್ಲರಿಗು ನಮಸ್ಕಾರ,


ಕೇವಲ ಒಂದೇ ಪಾತ್ರದ ಸುತ್ತ ಸುತ್ತುವ ಇಂದು ಕಥೆಯಾಗಿದ್ದು, ನಿರ್ದೇಶಕ ಕಮ್ ಹೀರೋ ರಾಜ್ ಪ್ರಭು ರವರು ಅಭಿನಯಿಸಿದ್ದಾರೆ, ಪೋಸ್ಟರ್ ನಲ್ಲೆ ಸುದ್ದಿಮಾಡಿರುವ "ಇಲ್ಲ" ಚಿತ್ರ ವನ್ನು ನೋಡಿ ಹರಸಿ, ಹಾರೈಸಿ ,  ಆಶೀರ್ವದಿಸಿ. ಮತ್ತು ಪ್ರೋತ್ಸಹಿಸಿ

http://cinetalenters.com/#/coming-soon-movie/79




.

ಇಂತಿ,
Ashoka cinetalenters 
99 64 97 98 99

Sunday, 12 November 2017

muhurtha mugisida "production no 99" chithra thanda

ಗೌರವಾನ್ವಿತರೇ,

ಇತ್ತೀಚಿಗೆ ನಮ್ಮ ೨ ನೇ ಸಿನಿಮಾದ ಮುಹೂರ್ತ ಸಮಾರಂಭ ನಮ್ಮ ಸಂಸ್ಥೆಯ ಆವರಣದಲ್ಲಿ ನೆರೆವೇರಿತು.

ಹೆಸರು : "ಪ್ರೊಡಕ್ಷನ್ ನಂಬರ್ ೯೯"
ನಿರ್ಮಾಣ : ಮೈ ಸೀನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ( cinetalenters.com )
ನಿರ್ದೇಶನ : ಅಶೋಕ, ಗಂಗರಾಜು, ಗೋವಿಂದ್
ಕಥೆ :  ಅಶೋಕ
ಚಿತ್ರಕಥೆ ಮತ್ತು ಸಂಭಾಷಣೆ : ಕಿರಣ್, ಗಂಗರಾಜು, ಗೋವಿಂದ್, ಹರಿ ಯಾದವ್
ತಾರಾಗಣ :  ಬಾಲು ಸಿರ್ಸಿ, ಇಮ್ರಾನ್, ಮಂಜುನಾಥ್ ಪಾಟೀಲ್, ಚರಣ್,  ಭರತ್  ಬಾಬು

ಮುಖ್ಯ ಅತಿಥಿಗಳು :  ಸುರೇಶ ತುಮಕೂರು, ರವಿ (ಸನ್ ಶೈನ್  ಎಂಟರ್ಪ್ರೈಸಸ್), ಹರಿ ಪ್ರಸಾದ್ (ಸುದೀಪ್ ಫ್ಯಾನ್ಸ್ ಪ್ರೆಸಿಡೆಂಟ್ ತುಮಕೂರು )


ಇಂತಿ,
ಚಿತ್ರ ತಂಡ













Monday, 9 October 2017

Location hutri betta Near hutridurga Tumakuru

ಎಲ್ಲರಿಗು ನಮಸ್ಕಾರ,

ಇಂದು ನಾನು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುತ್ರಿದುರ್ಗದ ಬಳಿ ಇರುವ ಹುತ್ರಿ    ಬೆಟ್ಟದ ಬಗ್ಗೆ ಬರೆಯಿತ್ತಿದ್ದೇನೆ . 


ಇದು ಬೆಂಗಳೂರಿನಿಂದ 65 ಕಿಲೋಮೀಟರ್ ಮತ್ತು ತುಮಕೂರಿನಿಂದ 51 ಕಿಲೋಮೀಟರ್ ದೊರದಲ್ಲಿದೆ. ಇದು ಕೆಂಪೇಗೌಡರಿಂದ 16 ನೇ ಶತಮಾನದಲ್ಲಿ ಕಟ್ಟಲ್ಪಟ್ಟಿದೆ. ಇದು 7 ಸುತ್ತಿನ ಕೋಟೆಯಾಗಿದೆ. ಇದು ಬೆಂಗಳೂರು ಸುತ್ತ ಇರುವ ೯ ದುರ್ಗಗಳಲ್ಲಿ ಒಂದು. ಬೆಟ್ಟದ ಮೇಲೆ ಶಂಕ್ರೇಶ್ವರ ಎಂಬ ದೇವಸ್ಥಾನವಿದೆ. ಸಂಕ್ರೇಶ್ವರ ಮುಂದೆ ಒಂದು ನಂದಿ ವಿಗ್ರಹವಿದೆ. ಬೆಟ್ಟದ ಮೇಲೆ ಹೋಗುವ  ಮಧ್ಯ ಆಂಜನೇಯ ದೇವಸ್ಥಾನವಿದೆ.  ಬೆಟ್ಟದ ಮೇಲೆ ಒಂದು ಊರು ಇದ್ದು. ಅಲ್ಲಿ ಆದಿನಾರಾಯಣ ಮತ್ತು ವೀರಭದ್ರ ಸ್ವಾಮಿ ದೇವಸ್ಥಾನಿದೆ .  ಪ್ರತಿ ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆ ನಡೆಯಲಿದೆ. ಈ ಬೆಟ್ಟದಿಂದ ಕೇವಲ 7 ಕಿಲೋಮೀಟರ್ ದೂರದಲ್ಲಿ ಕೆಂಪೇಗೌಡರ ಸಮಾಧಿಸ್ಥಳ ಕಂಡು ಬರುತ್ತದೆ. 

ಒಂದು ದಿನದ ಪ್ರವಾಸ ಕೈಗೊಳ್ಳಲು ಬಹಳ ಚೆನ್ನಾಗಿದ್ದು, ಬೆಂಗಳೂರಿಂದ ಮತ್ತು ಇತರ ಕಡೆಗಳಿಂದ ಪ್ರತಿ ವೀಕೆಂಡ್ ನಲ್ಲಿ ಜನರು ಬಂದು ಹೋಗುತ್ತಾರೆ, ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ, ಇದು ಜಿಲ್ಲಾಡಳಿತದ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.  ಸಂಬಂಧಪಟ್ಟವರು ಇತ್ತ ಗಮನ ಹರಿಸ ಬೇಕು ಮತ್ತು ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕು, ಇದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬುವುದು ಹುತ್ರಿದುರ್ಗ ಸ್ಥಳ ಸಂರಕ್ಷಣೆಯ ಸದಸ್ಯರಾದಂತಹ  ಶಿವ ಶಂಕರವರ ಅಭಿಪ್ರಾಯವಾಗಿದೆ. 

ಕಲ್ಯಾಣ್ ಕುಮಾರ್ ಅಭಿನಯದ ಬೆಟ್ಟದ ಭೈರವ ಸಿನೆಮಾ ಚಿತ್ರಿಕರಣವಾಗಿದೆ ಎಂದು ಸ್ಥಳೀಯರಿಂದ ತಿಳಿದುಬಂದಿದೆ. 

ಪ್ರವಾಸಿಗರ ಅನುಕೂಲಕ್ಕಾಗಿ ಕೆಲ ಫೋಟೋ ಮತ್ತು ವಿಡಿಯೋ ಒಂದನ್ನು ಅಪ್ಲೋಡ್ ಮಾಡಲಾಗಿದೆ. 

ನಿಮ್ಮ ಅನಿಸಿಕೆಗಳನ್ನು 9964979899 ಅಥವಾ info@cinetalenters.com ಗೆ ಬರೆಯಲು ಕೋರಲಾಗಿದೆ. 













Thursday, 5 October 2017

Location Devarayanadurga a hill station and Namada chilume

ಎಲ್ಲರಿಗು ನಮಸ್ಕಾರ,

ಇಂದು ನಾನು ತುಮಕೂರಿಗೆ ಕೇವಲ ೧೫ ಕಿಲೋಮೀಟರ್ ಹತ್ತಿರ  ಇರುವ ಒಂದು ಗಿರಿಧಾಮದ ಬಗ್ಗೆ ಹೇಳ ಬಯಸುತ್ತಿದ್ದೇನೆ.

ಇದರ ಮೂಲ ಹೆಸರು ಜಡಕನದುರ್ಗ, ಇದನ್ನು ಚಿಕ್ಕ ದೇವರಾಜ ಒಡೆಯರ್ ರವರು ವಶಪಡಿಸಿಕೊಂಡ ನಂತರ ಇದನ್ನು ಕರಿಗಿರಿ ಎಂದು ಮರುನಾಮಕರಣ ಮಾಡಿದರು ಆದರೆ ಕೊನೆಗೆ ದೇವರಾಯನದುರ್ಗ ಎಂದು ನಾಮಕರಣವಾಯಿತು.

ಇದು ಕೇವಲ ತುಮಕೂರು ಜಜಿಲ್ಲಾ ಕೇಂದ್ರದಿಂದ ೧೫ ಕಿಲೋಮೀಟರ್ ದೂರವಿದ್ದು ದಟ್ಟ ಕಾನನದ ನಡುವೆ ಹರಡಿಕೊಂಡಿದೆ. ಬೆಟ್ಟದ ಮೇಲೆ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯವಿದ್ದು ಇದನ್ನು ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿದೆ . ಕೆಳಗಡೆ ಭೋಗ ನರಸಿಂಹ ದೇವಸ್ಥಾನವಿದ್ದು, ಮೇಲೆ ಯೋಗ ನರಸಿಂಹ ಸ್ವಾಮಿ ದೇವಸ್ಥಾನವಿದೆ . ಈ ದೇವಸ್ಥಾನದ ಜೊತೆಗೆ ೩ ಕಲ್ಯಾಣಿಗಳಿದ್ದು ಕ್ರಮವಾಗಿ ನರಸಿಂಹ ತೀರ್ಥ, ಪರಸರ ತೀರ್ಥ ಮತ್ತು ಪಾದ ತೀರ್ಥ ಎಂದು ಹೆಸರಿಸಲಾಗಿದೆ . ಮೇಲೆ ಒಂದು ಗರುಡ ದೇವಾಲಯವಿದ್ದು ನೋಡಲು ಬಹಳ ಆಕರ್ಷಕವಾಗಿದೆ. ಇನ್ನು ಮೇಲೆ ಹೋದಂತೆ, ಪ್ರವಾಸಿ ಮಂದಿರ ಮತ್ತು ಇತರ ಬಂಗಲೆಗಳಿವೆ.

ನಾಮದ ಚಿಲುಮೆ.  

ತುಮಕೂರು ಕಡೆಯಿಂದ ಹೋದಾಗ ಮೊದಲಿಗೆ ಸಿಗುವುದೇ ನಾಮದ ಚಿಲುಮೆ ಪ್ರದೇಶ, ಇತಿಹಾಸದ ಪ್ರಕಾರ ಶ್ರೀರಾಮನು ಲಂಕೆಗೆ ಹೋಗುತ್ತಿರುವಾಗ ಕುಡಿಯಲು ನೀರು ಬೇಕಾಗುತ್ತದೆ, ಆಗ ಎಲ್ಲ ಕಡೆ  ಹುಡುಕಿದರೂ  ನೀರು ಸಿಗದಿದ್ದಾಗ ಶ್ರೀರಾಮನು ತನ್ನ ಒಂದು ಬಾಣದಿಂದ ನೆಲಕ್ಕೆ ಜೋರಾಗಿ ಬಿಲ್ಲಿನಿಂದ ನೆಲಕ್ಕೆ ಅಪ್ಪಳಿಸಿದಾಗ ನೀವು ಚಿಮ್ಮುತ್ತದೆ, ಅದು ನಾಮದ ರೀತಿಯಲ್ಲಿ ಹರಿಯುತ್ತದೆ ಆದ ಕಾರಣ ಇದಕ್ಕೆ ನಾಮದ ಚಿಲುಮೆ ಎಂದು ಹೆಸರು ಬಂದಿದೆ ಎಂಬುದಾಗಿ ತಿಳಿದು ಬಂದಿದೆ.

ಇದು ಬೆಂಗಳೂರಿಗೆ ೬೫ ಕಿಲೋಮೀಟರ್ ಹತ್ತಿರವಿದ್ದು. ೧೫ ಕಿಲೋಮೀಟರ್ ಹತ್ತಿರದಲ್ಲಿ ತುಮಕೂರು ಮತ್ತು ೨೫ ಕಿಲೋಮೀಟರ್  ಹತ್ತಿರದಲ್ಲಿ ದಾಬಸ್ಪೇಟೆ ರೈಲ್ವೆ ಸ್ಟೇಷನ್ ಇರುತ್ತವೆ.

ಬರುವ ಪ್ರವಾಸಿಗರಿಗೆ ಉಳಿದುಕೊಳ್ಳಲು KSTDC ವತಿಯಿಂದ ಹೋಟೆಲ್ ಮಯೂರ ಮೇಘದೂತ ವ್ಯವಸ್ಥೆ ಮಾಡಲಾಗಿದೆ .

ದಟ್ಟ ಕಾನನದ ನಡುವೆ ಇರುವುದರಿಂದ ಹಸಿರು ತುಂಬಿ ತುಳುಕುತ್ತಿದೆ. ಒಂದು ದಿನದ ಮಟ್ಟಿಗೆ ಪ್ರವಾಸ ಕೈಗೊಳ್ಳಲು  ವೀಕೆಂಡ್ ಮೋಜು ಕಳೆಯ ಬಹುದಾಗಿದೆ.

ಕೆಳಕಂಡ ಲಿಂಕ್ ಅನ್ನು ಫಾಲೋ ಮಾಡಿ ಮತ್ತು ನಿಮ್ಮಅಭಿಪ್ರಾಯ ಮತ್ತು  ಕಾಮೆಂಟ್ ಅನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಾಕಲು ಕೋರಿದೆ.

https://www.google.co.in/maps?q=devarayanadurga&um=1&ie=UTF-8&sa=X&ved=0ahUKEwitmen19tjWAhXKu48KHV2nA9gQ_AUICigB








Wednesday, 4 October 2017

Location Seebi Narasimhaswamy temple

ಎಲ್ಲರಿಗು ನಮಸ್ಕಾರ,

ಇಂದು ನಾನು ಸೀಬಿ ನರಸಿಂಹ ಸ್ವಾಮಿ ದೇವಸ್ಥಾನದ ಬಗ್ಗೆ ಚರ್ಚಿಸುತ್ತಿದ್ದೇನೆ, ಈ ದೇವಸ್ಥಾನವು ತುಮಕೂರು ನಗರದಿಂದ ಸುಮಾರು ೨೭ ಕಿಲೋಮೀಟರ್ ದೂರದಲ್ಲಿದೆ, ಇದನ್ನು ತಲುಪಲು ನಾವು NH ೪ ಮೂಲಕ ಹೋಗಬೇಕು ಮತ್ತು ನೆಲಹಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುತ್ತದೆ,

NH ೪ ಗೆ ಪಕ್ಕದಲ್ಲೇ ಇದೆ, ಸುಮಾರು ೨೫೦ ವರ್ಷಗಳ ಹಳೆಯ ದೇವಸ್ಥಾನವಾಗಿದೆ.  ಮೊದಲು ಗಣೇಶ ನಿಮ್ಮನ್ನು ಸ್ವಗತಿಸುತ್ತಾನೆ . ನಂತರ  ರಾಜ ಗೋಪುರವಿದ್ದು.  ಒಂದು ಕಲ್ಯಾಣಿ ಇದೆ. ಇದು ಒಂದು ಟ್ರಸ್ಟ್ ಗೆ ಸೇರಿರುತ್ತದೆ. ದೇವಸ್ಥಾನವು ಬಹಳ ಚೆನ್ನಾಗಿದ್ದು  ಒಂದು ದಿನದ ಪ್ರವಾಸ ಕೈಗೊಳ್ಳಬಹುದು.

ಹೋಗಲು ಇಷ್ಟಇರುವವರು ಈ ಕೆಳಕಂಡ ಲಿಂಕ್ ಅನ್ನು ಫಾಲೋ ಮಾಡಲು ಕೋರಿದೆ.

https://www.google.co.in/maps/place/Seebi+Narasimha+Swamy+Temple/@13.5242514,76.9984305,14.67z/data=!4m13!1m7!3m6!1s0x3bb093c64299f857:0xcd67a71d2115a3bf!2sNarasimha+Swamy+Temple,+Belagere,+Karnataka+577522!3b1!8m2!3d14.161708!4d76.7526793!3m4!1s0x0:0xb22bc3b4626d537f!8m2!3d13.530178!4d77.0009369

ದೇವಸ್ಥಾನದ ಇನ್ನಷ್ಟು ಇತಿಹಾಸ ಕೆದಕಲು ಪ್ರಯತ್ನಿಸಿದೆ ಆದರೆ ಸೂಕ್ತವಾದ ಮಾಹಿತಿ ಸಿಗಲಿಲ್ಲ.

ದೇವಸ್ಥಾನದ ಸಮಯವೂ ಬೆಳಗ್ಗೆ ೮ ಘಂಟೆ ಯಿಂದ ಮಾಧ್ಯಾನಃ ೧೨.೩೦ ರವರೆಗೆ
ಮತ್ತು ಮಾಧ್ಯಾನಃ ೩.೩೦ ರಿಂದ ಸಂಜೆ ೭ರ ವರೆಗೆ ತೆರೆದಿರುತ್ತದೆ.

ವಸಂತನರಸಾಪುರ ಕೈಗಾರಿಕಾ ಪ್ರದೇಶವು ಕೇವಲ ೧ ಕಿಲೋಮೀಟರ್ ಹತ್ತಿರದಲ್ಲಿದೆ.

ಹೋಗುವವರ ಅನುಕೂಲಕ್ಕಾಗಿ ಕೆಲ ಫೋಟೋಗಳನ್ನು ಶೇರ್ ಮಾಡಿದ್ದೇನೆ.

ನಿಮ್ಮ ಯಾವುದೇ ಅನಿಸಿಕೆಗಳಿದ್ದರೆ ೯೯೬೪೯೭೯೮೯೯ ಅಥವಾ ಫೇಸ್ಬುಕ್ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿ.