ಎಲ್ಲರಿಗು ನಮಸ್ಕಾರ,
ಇಂದು ನಾನು ತುಮಕೂರಿಗೆ ಕೇವಲ ೧೫ ಕಿಲೋಮೀಟರ್ ಹತ್ತಿರ ಇರುವ ಒಂದು ಗಿರಿಧಾಮದ ಬಗ್ಗೆ ಹೇಳ ಬಯಸುತ್ತಿದ್ದೇನೆ.
ಇದರ ಮೂಲ ಹೆಸರು ಜಡಕನದುರ್ಗ, ಇದನ್ನು ಚಿಕ್ಕ ದೇವರಾಜ ಒಡೆಯರ್ ರವರು ವಶಪಡಿಸಿಕೊಂಡ ನಂತರ ಇದನ್ನು ಕರಿಗಿರಿ ಎಂದು ಮರುನಾಮಕರಣ ಮಾಡಿದರು ಆದರೆ ಕೊನೆಗೆ ದೇವರಾಯನದುರ್ಗ ಎಂದು ನಾಮಕರಣವಾಯಿತು.
ಇದು ಕೇವಲ ತುಮಕೂರು ಜಜಿಲ್ಲಾ ಕೇಂದ್ರದಿಂದ ೧೫ ಕಿಲೋಮೀಟರ್ ದೂರವಿದ್ದು ದಟ್ಟ ಕಾನನದ ನಡುವೆ ಹರಡಿಕೊಂಡಿದೆ. ಬೆಟ್ಟದ ಮೇಲೆ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯವಿದ್ದು ಇದನ್ನು ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿದೆ . ಕೆಳಗಡೆ ಭೋಗ ನರಸಿಂಹ ದೇವಸ್ಥಾನವಿದ್ದು, ಮೇಲೆ ಯೋಗ ನರಸಿಂಹ ಸ್ವಾಮಿ ದೇವಸ್ಥಾನವಿದೆ . ಈ ದೇವಸ್ಥಾನದ ಜೊತೆಗೆ ೩ ಕಲ್ಯಾಣಿಗಳಿದ್ದು ಕ್ರಮವಾಗಿ ನರಸಿಂಹ ತೀರ್ಥ, ಪರಸರ ತೀರ್ಥ ಮತ್ತು ಪಾದ ತೀರ್ಥ ಎಂದು ಹೆಸರಿಸಲಾಗಿದೆ . ಮೇಲೆ ಒಂದು ಗರುಡ ದೇವಾಲಯವಿದ್ದು ನೋಡಲು ಬಹಳ ಆಕರ್ಷಕವಾಗಿದೆ. ಇನ್ನು ಮೇಲೆ ಹೋದಂತೆ, ಪ್ರವಾಸಿ ಮಂದಿರ ಮತ್ತು ಇತರ ಬಂಗಲೆಗಳಿವೆ.
ನಾಮದ ಚಿಲುಮೆ.
ತುಮಕೂರು ಕಡೆಯಿಂದ ಹೋದಾಗ ಮೊದಲಿಗೆ ಸಿಗುವುದೇ ನಾಮದ ಚಿಲುಮೆ ಪ್ರದೇಶ, ಇತಿಹಾಸದ ಪ್ರಕಾರ ಶ್ರೀರಾಮನು ಲಂಕೆಗೆ ಹೋಗುತ್ತಿರುವಾಗ ಕುಡಿಯಲು ನೀರು ಬೇಕಾಗುತ್ತದೆ, ಆಗ ಎಲ್ಲ ಕಡೆ ಹುಡುಕಿದರೂ ನೀರು ಸಿಗದಿದ್ದಾಗ ಶ್ರೀರಾಮನು ತನ್ನ ಒಂದು ಬಾಣದಿಂದ ನೆಲಕ್ಕೆ ಜೋರಾಗಿ ಬಿಲ್ಲಿನಿಂದ ನೆಲಕ್ಕೆ ಅಪ್ಪಳಿಸಿದಾಗ ನೀವು ಚಿಮ್ಮುತ್ತದೆ, ಅದು ನಾಮದ ರೀತಿಯಲ್ಲಿ ಹರಿಯುತ್ತದೆ ಆದ ಕಾರಣ ಇದಕ್ಕೆ ನಾಮದ ಚಿಲುಮೆ ಎಂದು ಹೆಸರು ಬಂದಿದೆ ಎಂಬುದಾಗಿ ತಿಳಿದು ಬಂದಿದೆ.
ಇದು ಬೆಂಗಳೂರಿಗೆ ೬೫ ಕಿಲೋಮೀಟರ್ ಹತ್ತಿರವಿದ್ದು. ೧೫ ಕಿಲೋಮೀಟರ್ ಹತ್ತಿರದಲ್ಲಿ ತುಮಕೂರು ಮತ್ತು ೨೫ ಕಿಲೋಮೀಟರ್ ಹತ್ತಿರದಲ್ಲಿ ದಾಬಸ್ಪೇಟೆ ರೈಲ್ವೆ ಸ್ಟೇಷನ್ ಇರುತ್ತವೆ.
ಬರುವ ಪ್ರವಾಸಿಗರಿಗೆ ಉಳಿದುಕೊಳ್ಳಲು KSTDC ವತಿಯಿಂದ ಹೋಟೆಲ್ ಮಯೂರ ಮೇಘದೂತ ವ್ಯವಸ್ಥೆ ಮಾಡಲಾಗಿದೆ .
ದಟ್ಟ ಕಾನನದ ನಡುವೆ ಇರುವುದರಿಂದ ಹಸಿರು ತುಂಬಿ ತುಳುಕುತ್ತಿದೆ. ಒಂದು ದಿನದ ಮಟ್ಟಿಗೆ ಪ್ರವಾಸ ಕೈಗೊಳ್ಳಲು ವೀಕೆಂಡ್ ಮೋಜು ಕಳೆಯ ಬಹುದಾಗಿದೆ.
ಕೆಳಕಂಡ ಲಿಂಕ್ ಅನ್ನು ಫಾಲೋ ಮಾಡಿ ಮತ್ತು ನಿಮ್ಮಅಭಿಪ್ರಾಯ ಮತ್ತು ಕಾಮೆಂಟ್ ಅನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಾಕಲು ಕೋರಿದೆ.
https://www.google.co.in/maps?q=devarayanadurga&um=1&ie=UTF-8&sa=X&ved=0ahUKEwitmen19tjWAhXKu48KHV2nA9gQ_AUICigB

No comments:
Post a Comment