ಎಲ್ಲರಿಗು ನಮಸ್ಕಾರ,
ಇಂದು ನಾನು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುತ್ರಿದುರ್ಗದ ಬಳಿ ಇರುವ ಹುತ್ರಿ ಬೆಟ್ಟದ ಬಗ್ಗೆ ಬರೆಯಿತ್ತಿದ್ದೇನೆ .
ಇದು ಬೆಂಗಳೂರಿನಿಂದ 65 ಕಿಲೋಮೀಟರ್ ಮತ್ತು ತುಮಕೂರಿನಿಂದ 51 ಕಿಲೋಮೀಟರ್ ದೊರದಲ್ಲಿದೆ. ಇದು ಕೆಂಪೇಗೌಡರಿಂದ 16 ನೇ ಶತಮಾನದಲ್ಲಿ ಕಟ್ಟಲ್ಪಟ್ಟಿದೆ. ಇದು 7 ಸುತ್ತಿನ ಕೋಟೆಯಾಗಿದೆ. ಇದು ಬೆಂಗಳೂರು ಸುತ್ತ ಇರುವ ೯ ದುರ್ಗಗಳಲ್ಲಿ ಒಂದು. ಬೆಟ್ಟದ ಮೇಲೆ ಶಂಕ್ರೇಶ್ವರ ಎಂಬ ದೇವಸ್ಥಾನವಿದೆ. ಸಂಕ್ರೇಶ್ವರ ಮುಂದೆ ಒಂದು ನಂದಿ ವಿಗ್ರಹವಿದೆ. ಬೆಟ್ಟದ ಮೇಲೆ ಹೋಗುವ ಮಧ್ಯ ಆಂಜನೇಯ ದೇವಸ್ಥಾನವಿದೆ. ಬೆಟ್ಟದ ಮೇಲೆ ಒಂದು ಊರು ಇದ್ದು. ಅಲ್ಲಿ ಆದಿನಾರಾಯಣ ಮತ್ತು ವೀರಭದ್ರ ಸ್ವಾಮಿ ದೇವಸ್ಥಾನಿದೆ . ಪ್ರತಿ ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆ ನಡೆಯಲಿದೆ. ಈ ಬೆಟ್ಟದಿಂದ ಕೇವಲ 7 ಕಿಲೋಮೀಟರ್ ದೂರದಲ್ಲಿ ಕೆಂಪೇಗೌಡರ ಸಮಾಧಿಸ್ಥಳ ಕಂಡು ಬರುತ್ತದೆ.
ಒಂದು ದಿನದ ಪ್ರವಾಸ ಕೈಗೊಳ್ಳಲು ಬಹಳ ಚೆನ್ನಾಗಿದ್ದು, ಬೆಂಗಳೂರಿಂದ ಮತ್ತು ಇತರ ಕಡೆಗಳಿಂದ ಪ್ರತಿ ವೀಕೆಂಡ್ ನಲ್ಲಿ ಜನರು ಬಂದು ಹೋಗುತ್ತಾರೆ, ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ, ಇದು ಜಿಲ್ಲಾಡಳಿತದ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸ ಬೇಕು ಮತ್ತು ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕು, ಇದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬುವುದು ಹುತ್ರಿದುರ್ಗ ಸ್ಥಳ ಸಂರಕ್ಷಣೆಯ ಸದಸ್ಯರಾದಂತಹ ಶಿವ ಶಂಕರವರ ಅಭಿಪ್ರಾಯವಾಗಿದೆ.
ಕಲ್ಯಾಣ್ ಕುಮಾರ್ ಅಭಿನಯದ ಬೆಟ್ಟದ ಭೈರವ ಸಿನೆಮಾ ಚಿತ್ರಿಕರಣವಾಗಿದೆ ಎಂದು ಸ್ಥಳೀಯರಿಂದ ತಿಳಿದುಬಂದಿದೆ.
ಪ್ರವಾಸಿಗರ ಅನುಕೂಲಕ್ಕಾಗಿ ಕೆಲ ಫೋಟೋ ಮತ್ತು ವಿಡಿಯೋ ಒಂದನ್ನು ಅಪ್ಲೋಡ್ ಮಾಡಲಾಗಿದೆ.
ನಿಮ್ಮ ಅನಿಸಿಕೆಗಳನ್ನು 9964979899 ಅಥವಾ info@cinetalenters.com ಗೆ ಬರೆಯಲು ಕೋರಲಾಗಿದೆ.