ಎಲ್ಲರಿಗು ನಮಸ್ಕಾರ,
ಸುಮಾರು ನೂರು ದಿನಗಳ ನಂತರ ನಾನು ಈ ಒಂದು ಆರ್ಟಿಕಲ್ ಅನ್ನು ಬರೆಯುತ್ತಿದ್ದೇನೆ.
ಇಂದು ನಿಮ್ಮ ಮುಂದೆ ತರುತ್ತಿರುವ 50 ನೇ ಆರ್ಟಿಕಲ್ ಆಗಿರುತ್ತದೆ. ಇನ್ನು ಮುಂದೆ ನಾನು ಕೆಲವು ಪ್ರೇಕ್ಷಣೀಯ ಸ್ಥಳಗಳ ಮಾಹಿತಿ ಒದಗಿಸಲು ಪ್ರಯತ್ನಿಸುತ್ತೇನೆ.
ಇಂದು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿರುವ ಒಂದು ಸ್ಥಳದ ಹೆಸರು "ಹತ್ಯಾಲ್ ಬೆಟ್ಟ" ಒಂದು ಗಿರಿಧಾಮ. ಇದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಯಗಚಿಕಟ್ಟೆ ಬಳಿ ಕಂಡು ಬರುತ್ತದೆ. ಈ ಒಂದು ಗಿರಿಧಾಮವು ತುಮಕೂರಿನಿಂದ ಸುಮಾರು 50 ಕಿಲೋಮೀಟರ್, ತಿಪಟೂರಿನಿಂದ 20 ಕಿಲೋಮೀಟರು ಮತ್ತು ಬೆಂಗಳೂರಿನಿಂದ 120 ಕಿಲೋಮೀಟರ್ ದೂರವಿದೆ.
ರಾಷ್ಟೀಯ ಹೆದ್ದಾರಿ 206 ಈ ಗಿರಿಧಾಮದ ಮುಂದೆ ಹಾದುಹೋಗುತ್ತದೆ ಮತ್ತು ತುಮಕೂರು ಮತ್ತು ಬೆಂಗಳೂರಿನಿಂದ ಸಂಪರ್ಕ ಕಲ್ಪಿಸುತ್ತದೆ.
ಈ ಗಿರಿಧಾಮವು ನೆಲ ಮಟ್ಟದಿಂದ 500 ಅಡಿ ಎತ್ತರವಿದೆ. ಬೆಟ್ಟದ ಮೇಲೆ ಶ್ರೀ ನರಸಿಂಹಸ್ವಾಮಿಯ ದೇವಸ್ಥಾನವಿದೆ. ಈ ದೇವಸ್ಥಾನವು 400 ವರ್ಷಗಳ ಇತಿಹಾಸ ಇದೆ ಎಂದು ಸ್ಥಳೀಯರಿಂದ ತಿಳಿದು ಬಂದಿದೆ. ಆ ದೇವಾಲಯವು ಪ್ರಮುಖ ವೈಷ್ಣವ ದೇವಾಲಯ ಮತ್ತು ವೀರಶೈವ ಅರ್ಚಕರನ್ನು ಹೊಂಡಿರುವ ಪುರಾತನ ದೇವಾಲಯವಾಗಿರುತ್ತದೆ. ರಾಷ್ಟೀಯ ಹೆದ್ದಾರಿ 206ರ ಉತ್ತರಕ್ಕೆ 2 ಕಿಲೋಮೀಟರ್ ದೂರದಲ್ಲಿರುತ್ತದೆ.
ಇದು ಒಂದು ಪ್ರವಾಸಿ ತಾಣವಾಗಿದ್ದು ಸುಮಾರು 383 ಎಕರೆ ವಿಸ್ತಾರದಲ್ಲಿ ಹರಡಿಕೊಂಡಿದೆ. ಇದು ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗವಾಗಿದ್ದು. ಸುತ್ತಲೂ ಬೆಟ್ಟ ಗುಡ್ಡಗಳಿಂದ ಕೂಡಿದೆ. ವೀಕೆಎನ್ಡ್ ಮೋಜು ಕಳೆಯಲು ಅಥವಾ ಒಂದು ದಿನದ ಪ್ರವಾಸ ಕೈಗೊಳ್ಳಲು ಹೇಳಿ ಮಾಡಿಸಿದ ಜಾಗವಾಗಿದೆ.
ಸಿನಿಮಾ ಮಂದಿಗೆ ಇದು ಕ್ಲೈಮಾಕ್ಸ್, ಮದುವೆ ಮತ್ತು ಇತರ ಸನ್ನಿವೇಶಗಳನ್ನು ಚಿತ್ರಿಕರಣ ಮಾಡಲು ಹೇಳಿ ಮಾಡಿಸಿದ ಜಾಗವಾಗಿರುತ್ತದೆ.
ನಿಮ್ಮೆಲ್ಲರ ಅನುಕೂಲಕ್ಕಾಗಿ ಕೆಲ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುತ್ತಿದ್ದೇನೆ. ಮತ್ತು ಮುಂದಿನ ಲಿಂಕನ್ನು ಫಾಲೋ ಮಾಡಿ.
https://www.google.co.in/maps/place/Hatyal+Narasimha+Swamy+Temple/@13.3357617,76.7166966,15z/data=!4m5!3m4!1s0x0:0x4681501d4d035dd!8m2!3d13.3357617!4d76.7166966
ನಿಮ್ಮ ಅನಿಸಿಕೆ, ಅಭಿಪ್ರಾಯ, ಟೀಕೆಗಳನ್ನು 9964979899 ಗೆ ವಾಟ್ಸಪ್ಪ್ ಅಥವಾ info@cinetalenters.com ಅಥವಾ cinetalenters@gmail.com ಅಥವಾ ಕೆಳಕಂಡ ಕಾಮೆಂಟ್ಸ್ box ನಲ್ಲಿ ಹಾಕಿ.

No comments:
Post a Comment