ಗೆ,
ವಿಷಯ
: ಹೊಸ ಸುಧಾರಿತ ತಂತ್ರಜ್ಞಾನಧಾರಿತ "ಸುಗಮ" ಸಾರಿಗೆ ವ್ಯವಸ್ಥೆ
ಮಾನ್ಯರೆ,
ಮೇಲ್ಕಂಡ
ವಿಷಯಕ್ಕೆ ಸಂಬಂಧಿಸಿದಂತೆ ತುಮಕೂರಿನ ಉದ್ಯಮಿ ಅಶೋಕ ಆದ ನಾನು ಒಂದು
ಹೊಸ ಸಾರಿಗೆ ವ್ಯವಸ್ಥೆ ಯೋಜನೆಯನ್ನು ಸಿದ್ದಪಡಿಸಿದ್ದು, ಇದಕ್ಕೆ "ಸುಗಮ" ಯಾರಿಗೆ ವ್ಯವಸ್ಥೆ ಎಂದು ಹೆಸರಿಡಲಾಗಿದೆ. ಇದರ ಮುಖ್ಯ ಉದ್ದೇಶ ಟ್ರಾಫಿಕ್ ಜಾಮ್ ತಡೆಯುವುದು.
ನಿಮಗೆ
ತಿಳಿದಂತೆ ನಮ್ಮಲ್ಲಿ 3 ರೀತಿಯ ಸಾರಿಗೆ ವ್ಯವಸ್ಥೆ
ಇದೆ.
1.
ಭೂ ಸಾರಿಗೆ
2.
ಜಲ ಸಾರಿಗೆ
3.
ವಾಯು ಸಾರಿಗೆ
ಆದರೆ
ಇಂದು ನಾನು ನಿಮ್ಮ ಮುಂದೆ ಹೊಸ ಸುಧಾರಿತ ತಂತ್ರಜ್ಞಾನಧಾರಿತ "ಸುಗಮ" ಸಾರಿಗೆ ವ್ಯವಸ್ಥೆಯನ್ನು ಪ್ರಸ್ತುತ ಪಡಿಸುತ್ತಿದ್ದೇನೆ. "ಸುಗಮ" ಎಂದರೆ ಇಂಗ್ಲಿಷ್ ನಲ್ಲಿ "ಸೀ" ಎಂದು ಹೆಸರಿಡಲಾಗಿದೆ.
ಸು
- ಸೂರ್ಯ
ಗ
- ಗಾಳಿ
ಮ
- ಭೂಮಿ
ಸೂರ್ಯ,
ಗಾಳಿ ಮತ್ತು ಭೂಮಿ ಯಾ ಸಹಾಯದಿಂದ ಮುಂದೆ
ಸಾಗುವ ಈ ವ್ಯವಸ್ಥೆಯನ್ನು "ಸುಗಮ" ಸಾರಿಗೆ
ಎಂದು ನಾಮಕರಣಮಾಡಲಾಗಿದೆ, ಇದು ಮುಂದೆ ಅಂದರೆ 2018 - 2020 ರ ನಂತರ ಬರುವ
ವ್ಯವಸ್ಥೆಯಾಗಿದ್ದು ತುಮಕೂರಿನಂತಹ ಬೆಳೆಯುತ್ತಿರುವ ನಗರಕ್ಕೆ ಇದು ಬಹಳಷ್ಟು ಸಹಕಾರಿಯಾಗಲಿದೆ, ಬೇಕಿದ್ದಲ್ಲಿ ಇದನ್ನು ಸ್ಮಾರ್ಟ್ ಸಿಟಿ ಯಲ್ಲಿ ಕೂಡ ನಾವು ಸೇರಿಸಬಹುದಾಗಿದೆ, ಮತ್ತು ಇದಕ್ಕೆ ಬೇಕಿರುವ ಸುಧಾರಿತ ತಂತ್ರಜ್ಞವೂ ಲಭ್ಯವಿದೆ, ವಿಜ್ಞಾನ ಮತ್ತು ತಂತ್ರಜ್ಞಾನವೇ ನನ್ನ
ಉಸಿರಾಗಿರುವುದರಿಂದ ಆಗಾಗಲೇ 2-3 ಬಾರಿ ಕೆಲವೊಂದು ವಿಷಯಗಳ ಬಗ್ಗೆ ಪತ್ರಿಕಾಗೋಷ್ಠಿ ಯನ್ನು ಕರೆದು ವಿಷಯ ಪ್ರಸ್ತಾಪಿಸಿದ್ದೇನೆ, ಆದರೆ ಜಿಲ್ಲೆಯ ಯಾವೊಬ್ಬರು ಅವುಗಳನ್ನು ಕೇಳುವ ಮನಸ್ಸು ಮಾಡಿರುವುದಿಲ್ಲ ಆದ್ದರಿಂದ ಈಗ ಯಾರಾದರೂ
ಸಹೃದಯಿಗಳು ಕೇಳುವಂತಹವರು ಮುಂದೆ
ಬಂದರೆ ಮಾತ್ರ ಪ್ರಸ್ತಾಪಿಸಲು ಇಚ್ಛಿಸಿದ್ದೇವೆ, ಇಲ್ಲವಾದಲ್ಲಿ ಇದನ್ನು ಇಲ್ಲಿಯೇ ನಿಲ್ಲಿಸಲು ನಿಲ್ಲಿಸಲಿದ್ದೇನೆ.
"ಸುಗಮ" ಸಾರಿಗೆ
ವ್ಯವಸ್ಥೆ ಬಗ್ಗೆ
ಮೇಲೆ
ತಿಳಿಸಿದಂತೆ ಆ ಸಾರಿಗೆ ವ್ಯವಸ್ಥೆಯು
ಬೆಂಗಳೂರಿನ ಮೆಟ್ರೋ, ಮೊನೊ ರೈಲುಗಳಿಗೆ ಪರ್ಯಾಯವಾಗಿ ಬಳಸಬಹುದಾಗಿದೆ, ಮತ್ತು ಖರ್ಚು ಕಡಿಮೆ ಇದೆ, ಮುಂದಿನ 10 ವರ್ಷಗಳಲ್ಲಿ ಪೆಟ್ರೋಲ್,
ಡೀಸಲ್ ಮುಗಿಯುತ್ತದೆ, ಸೂರ್ಯ ಒಬ್ಬನೇ ಇಂಧನದ ಮೂಲವಾಗಿದ್ದರು ಮಳೆಗಾಲದಲ್ಲಿ ಅಥವಾ ಚಳಿಗಾಲದಲ್ಲಿ ನಾವು ಸೂರ್ಯನ ಮೇಲೆ ಅವಲಂಭಿತವಾಗಲು ಸಾಧ್ಯವಿರುವುದಿಲ್ಲ, ಈಗಾಗಲೇ ಬೇರೆ ದೇಶಗಳಲ್ಲಿ ಪರ್ಯಾಯ ವ್ಯವಸ್ಥೆ ಹುಡುಕಾಟದಲ್ಲಿ ತೊಡಗಿವೆ ಆದರೆ ನಾವು ಬಹಳ ಹಿಂದೆ ಉಳಿದಿದ್ದೇವೆ,
ನೀರನ್ನು
ಉಪಯೋಗಿಸಿಕೊಂಡು ನಾವು ಚಾಲನೆ ಮಾಡಬಹುದು ಆದರೆ, ನೀರು ಸುಲಭವಾಗಿ ಸಿಗುವುದರಿಂದ ಟ್ರಾಫಿಕ್ ಈಗಿರುವುದಕ್ಕಿಂತಲೂ ಉಲ್ಬಣಗೊಳ್ಳಲಿದೆ.
ಈ
ಎಲ್ಲ ತೊಂದರೆಗಳಿಂದ ಪಾರಾಗುವ ಒಂದು ವ್ಯವಸ್ಥೆಯೇ "ಸುಗಮ" ಸಾರಿಗೆ ವ್ಯವಸ್ಥೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ 9964979899 ಅನ್ನು ಸಂಪರ್ಕಿಸಲು ಕೋರಿದೆ.
ಇಂತಿ,
ಅಶೋಕ