Tuesday, 31 January 2017

auto driver inda Style Raja na Varege

ಎಲ್ಲರಿಗೂ ನಮಸ್ಕಾರ,

ನೋಡೋಕ್ಕೆ ರಾಕಿಂಗ್ ಸ್ಟಾರ್ ಯಶ್ ತರಹ ಕಣೋ ಈ ಹುಡುಗನ ಹೆಸರು ಗಿರೀಶ್ ಮೂಲತಃ ತುಮಕೂರಿನ ಕುಣಿಗಲ್ ತಾಲೂಕಿನ ಹುಲಿಯುರಿದುರ್ಗವರು ತಂದೆ ಮತ್ತು ತಾಯಿ ಕೃಷಿಕರು, ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಆಟೋ ಡ್ರೈವರ್ ಕೆಲಸ ಮಾಡ್ತಿರುತ್ತಾರೆ, ಜೊತೆ ಜೊತೆಗೆ ಆಕ್ಟಿಂಗ್ ಕಡೆ ಸ್ವಲ್ಪ ಒಲವು ಜಾಸ್ತಿ ಇರುತ್ತೆ ಅಲ್ಲಿ ಇಲ್ಲಿ ಆಡಿಷನ್ ಅಟೆಂಡ್ ಮಾಡ್ಕೊಂಡು ಹೇಗೋ ಕಾಲ ಕಳೆಯುತ್ತಿರುತಾರೆ. ನೋಡೋಕ್ಕೆ ಥೇಟ್ ಯಶ್ ತರೇನೇ ಇದ್ರಲ್ವಾ, ಇದನ್ನು ಒಬ್ಬರು ಪ್ರೊಡ್ಯೂಸರ್ ಇವರನ್ನು ನೋಡಿ  "ಸ್ಟೈಲ್ ರಾಜ"  ಸಿನೆಮಾಗೆ ಹೀರೋ ಮಾಡುತ್ತಾರೆ, ಸಿನಿಮಾ ಸ್ಟಾರ್ಟ್ ಆಗಿ ಶೂಟಿಂಗ್ ಮುಗಿದು ದಿನಾಂಕ 3-2-2017 ಶುಕ್ರವಾರ ಸಿನಿಮಾ ರಿಲೀಸ್ ಆಗ್ತ್ತಿದೆ. ಬಹಳ ಕಷ್ಟ ಪಟ್ಟು ಮೇಲೆ ಬಂದಿರುವ ಆ ಆಟೋ ಡ್ರೈವರ್ ಅನ್ನು ಬೆಳೆಸೋ ಹೊಣೆ ನಮ್ಮದಾಗಿದೆ ಫ್ರೆಂಡ್ಸ್ ಜೊತೆಗೆ ಆರ್ಟಿಸ್ಟ್ ಆಗಬೇಕು ಅನ್ನುವವರಿಗೆ ಇವರು ಸ್ಪೂರ್ತಿ ಕೂಡ ಆಗಿದ್ದರೆ.  ದಯವಿಟ್ಟು ಸಿನಿಮಾ ನೋಡಿ ಬೆಳೆಸಿ, ಹರಸಿ, ಹಾರೈಸಿ.



Saturday, 28 January 2017

hosabarige free registration

          ಸಿನಿಟಾಲೆಂಟ್ರ್ಸ್.ಕಾಂ ಅಲ್ಲಿ ಉಚಿತ ರಿಜಿಸ್ಟ್ರೇಷನ್ ಮಾಡಲು ನಿಮ್ಮ ಮೊದಲ ಹೆಸರು, ಕೊನೆ ಹೆಸರು, ಹುಟ್ಟಿದ ದಿನಾಂಕ, ಕಾಂಟಾಕ್ಟ್ ನಂಬರ್, ಇಮೇಲ್ ವಿಳಾಸವನ್ನು 9964979899 ಗೆ ಕಳುಹಿಸಲು ಕೋರಿದೆ.
ರಿಜಿಸ್ಟರ್ ಮಾಡಿದ ನಂತರ ಮೊಬೈಲ್ ಮತ್ತು ಇಮೇಲ್ ವಿಳಾಸಕ್ಕೆ ಪಾಸ್ವರ್ಡ್ ಬರುತ್ತದೆ ಬಂದ ನಂತರ ಸಿನಿಟಾಲೆಂಟ್ರ್ಸ್.ಕಾಂ ಗೆ ವಿಸಿಟ್ ಮಾಡಿ ಲಾಗಿನ್ ಬಟನ್ ಕ್ಲಿಕ್ ಮಾಡಿ ನಿಮ್ಮ ಇಮೇಲ್ ವಿಳಾಸ ಮತ್ತು ಪಾಸ್ವರ್ಡ್ ಉಪಯೋಗಿಸಿಕೊಂಡು ಲಾಗಿನ್ ಆಗಿ ನಿಮ್ಮ ಪ್ರೊಫೈಲ್ ಕ್ರಿಯೇಟ್ ಮಾಡಿ ನಂತರ ನಿಮ್ಮ ಪಾಸ್ವರ್ಡ್ ಅನ್ನು ಚೇಂಜ್ ಮಾಡಿ ಏನಾದರು ಗೊಂದಲ ಅಥವಾ ಅಡಚಣೆ ಉಂಟಾದರೆ 9964979899 ಗೆ ವಾಟ್ಸಪ್ಪ್ ಅಥವಾ ಕರೆ ಮಾಡಲು ಕೋರಿದೆ.


Friday, 27 January 2017

hosabarige uttama avakasha matthu prathuibhege thakka prathipala

ಆತ್ಮೀಯರೇ,

"ಪ್ರತಿಭೆ ನಿಮ್ಮದು ವೇದಿಕೆ ನಮ್ಮದು"  ಎಂಬ ಧ್ಯೇಯ ವಾಕ್ಯ ಇಟ್ಟುಕೊಂಡಿರುವ ಸಂಸ್ಥೆ, ಸಿನಿಟಾಲೆಂಟ್ರ್ಸ್.ಕಾಂ ಸಂಸ್ಥೆಯು ಹೊಸಬರಿಗೆ ಉಚಿತವಾಗಿ ಒಂದು ಅವಕಾಶವನ್ನು ಒದಗಿಸುತ್ತಿದೆ. ನಮ್ಮ ಸಂಸ್ಥೆಯು ಈಗ ಹೊಸಬರನ್ನು ಪ್ರೋತ್ಸಹಿಸುವ ಸಲುವಾಗಿ "ಮೊದಲ ಹೆಜ್ಜೆ" ಎಂಬ ಕಿರು ಚಿತ್ರಗಳ ಸರಣಿಯನ್ನು ಆರಂಭಿಸಿದ್ದೇವೆ. ಜೀವನದಲ್ಲಿ ನೊಂದಿರುವವರು, ಅವಕಾಶಕ್ಕಾಗಿ ಹುಡುಕುತ್ತಿರುವವರು, ನಮ್ಮಲ್ಲಿ ನಿಮ್ಮ ಒಂದು ಅರ್ಥಪೂರ್ಣ ಪ್ರೊಫೈಲ್ ಅನ್ನು ರಿಜಿಸ್ಟರ್ ಮಾಡಿ ನಿಮ್ಮ ಭವಿಷ್ಯವನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ ಜೊತೆಗೆ 250 ಮ್ ಬಿ ಯಷ್ಟು ಡೇಟಾ ಸ್ಟೋರೇಜ್ ಅನ್ನು ಕೊಡಲಾಗುವುದು., ಅದು ಉಚಿತವಾಗಿ, ಯಾವುದೇ ಷರತುಗಳಿಲ್ಲದೆ, ಚಿತ್ರಿಕರಣಕ್ಕಾಗಿ ತಗಲುವ ವೆಚ್ಚವನ್ನು ಸಂಸ್ಥೆಯೇ ಭರಿಸಲಿದೆ. ಇಲ್ಲಿ ಉತ್ತಮವಾಗಿ ತಮ್ಮ ಪ್ರತಿಭೆ ಜನರಿಂದ ಗುರುತಿಸಲ್ಪಟ್ಟರೆ ಅವರನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುವುದು. ಒಬ್ಬರಿಗೆ 1 ಅವಕಾಶವನ್ನು ಮಾತ್ರ ಕೊಡಲಾಗುವುದು.

ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಲು ನೀವು ಮಾಡಬೇಕಾಗಿರುವುದು ಇಷ್ಟೇ.
1. ಸಿನಿಟಾಲೆಂಟ್ರ್ಸ್.ಕಾಂ ವಿಸಿಟ್ ಮಾಡಿ.
2.ಅಲ್ಲಿ ಬಲಬದಿಯ ಮೇಲೆ ಕಾಣುವ ರಿಜಿಸ್ಟರ್ ಬಟನ್ ಅನ್ನು ಕ್ಲಿಕ್ ಮಾಡಿ.
3. ಕೂಪನ್ ಕೋಡ್ ಪಡೆಯಲು ನಮ್ಮ ಹೆಲ್ಪ್ ಲೈನ್ ನಂಬರ್ ಆದ 9964979899 ಗೆ ಕರೆಮಾಡಿ ಅಥವಾ ವಾಟ್ಸ್ಅಪ್ ಮಾಡಿ.
4.ಕೂಪನ್ ಕೋಡ್ ಎಂಟ್ರಿ ಮಡಿದ ನಂತರ ರಿಡೀಮ್ ಬಟನ್ ಕ್ಲಿಕ್ ಮಾಡಿ.
5. ಫಸ್ಟ್ ನೇಮ್, ಲಾಸ್ಟ ನೇಮ್, ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸವನ್ನು ತುಂಬಿ.
6. ರಿಜಿಸ್ಟರ್ ಬಟನ್ ಕ್ಲಿಕ್ ಮಡಿದ ತಕ್ಷಣ ನಿಮ್ಮ ಮೊಬೈಲ್ ಅಥವಾ ಇಮೇಲ್ ವಿಳಾಸಕ್ಕೆ ಒಂದು ಪಾಸ್ವರ್ಡ್ ಬರುತ್ತದೆ.
7.ನಿಮ್ಮ ಇಮೇಲ್ ವಿಳಾಸ ಮತ್ತು ಮೊಬೈಲ್ ಗೆ ಬಂದಿರುವ  ಪಾಸ್ವರ್ಡ್ ಸಹಾಯದಿಂದ ಲಾಗಿನ್ ಆಗಿ ನಿಮ್ಮ ಪೋರ್ಟ್ಫೋಲಿಯೋ ಅನ್ನು ಕ್ರಿಯೇಟ್ ಮಾಡಿ.

ಏನಾದರು ಗೊಂದಲ ಅಥವಾ ತೊಂದರೆ ಉಂಟಾದರೆ ತಕ್ಷಣವೇ ನಮ್ಮ ಹೆಲ್ಪ್ ಲೈನ್ ನಂಬರ್ 9964979899  ಅನ್ನು ಸಂಪರ್ಕಿಸಬಹುದು.

ನಮ್ಮ ಇದರ ಮುಖ್ಯ ಉದ್ದೇಶ ಪ್ರತಿಭೆಗೆ ತಕ್ಕ ಪ್ರತಿಫಲ ಸಿಗುವುದು ಮತ್ತು ಕನ್ನಡ ಚಿತ್ರ ರಂಗವನ್ನು ಬೆಳೆಸುವುದು.


Tuesday, 24 January 2017

kivi mathu

ಅವಕಾಶ ಹುಡುಕುತ್ತಿರುವವರಿಗೆ  ಮತ್ತು ಅವಕಾಶ ಕೊಡುವವರಿಗೆ ಒಂದು ಕಿವಿ ಮಾತು.

ಹೊಸಬರಿಗೆ ಅಥವಾ ಅವಕಾಶ ಹುಡುಕುತ್ತಿರುವವರಿಗೆ  ಇದು ನಮ್ಮದೊಂದು ಮನವಿ ನಿಮಗೆ ಅವಕಾಶ ಬೇಕೆಂದರೆ ವಾಟ್ಸಪ್ಪ್ ಅಥವಾ ಮೆಸೇಜ್ ಮಾಡಿ ಮಾಹಿತಿ ತಿಳಿದುಕೊಳ್ಳಿ. ದಯವಿಟ್ಟು ಯಾರು ಸಹ ಮಿಸ್ ಕಾಲ್ ಕೊಡಬೇಡಿ, ಇದು ನಿಮ್ಮ  ಮೇಲೆ ಒಂದು ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡುತ್ತದೆ. ಇದರಿಂದ ನಿಮಗೆ ಅವಕಾಶ ವಂಚಿತರಾಗುವ ಸಂಭವವಿರುತ್ತದೆ. ಇದು ನಮ್ಮ ಕಳಕಳಿಯ ಮನವಿ.

ಅವಕಾಶ ಕೊಡುವವರು ದಯವಿಟ್ಟು ನಿಮಗೆ ಕಳುಹಿಸಿದ ಯಾವ ಅಭ್ಯರ್ಥಿಯೇ ಆಗಲಿ ನಿಮಗೆ ಇಷ್ಟವಾದರೆ ಅವರಿಗೆ ತಿಳಿಸಿ ಇಲ್ಲವಾದರೆ ಆದಷ್ಟು ಬೇಗ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ, ದಯವಿಟ್ಟು ಕಾಯಿಸಬೇಡಿ ಇದು ನಮ್ಮ ಮನವಿ.

ಏಕೆಂದರೆ ಯಾರು ಯಾರ ಕನಸಿನ ಜೊತೆಯೂ ಆಟವಾಡಲು ಅಧಿಕಾರ ಇಲ್ಲ. ಯಾರು ಯಾರಿಗೂ ಕಿರಿಕಿರಿ ಉಂಟು ಮಡದಿರೆಂಬುದು ನನ್ನ ಆಶಯ

ನಿಮ್ಮ ಅಭಿಪ್ರಾಯವಳನ್ನು ನಮಗೆ ತಿಳಿಸಲು 9964979899  ವಾಟ್ಸ್ಅಪ್ ಮಾಡಲು ಕೋರಿದೆ.

Technical Team of Gujari Babanna Hrasi Haraisi Ashirvadisi


Hi Every one,

I am introducing  Technical Team of Gujari Babannana butterfly Effect.


Director of Photography : Deepith  Bejai Ratnakar

Dialogues : Kiran Akki,

Lyrics : Kiran bhairumbhe,

Story : Keshava kudla,

Screenplay, Direction and Producer: Karubala Vijeth

Poster designer : Shreekanth Patil.

Promotion and Media Partner : www.Cinetalenters.com

Artist Department Pending...

Harasi, Haraisi, Ashirvadisi.

butterflyge pawana bala

      ಸಿನಿಟಾಲೆಂಟ್ರ್ಸ್.ಕಾಂ ಸಂಸ್ಥೆ ಅಡಿಯಲ್ಲಿ ತಯಾರಾಗುತ್ತಿರುವ ಗುಜರಿ ಬಾಬಣ್ಣನ ಬಟರ್ ಫ್ಲೈ ಎಫೆಕ್ಟ್ ಚಿತ್ರಕ್ಕೆ ಕನ್ನಡ ಟೆಲಿ ಚಿತ್ರ ಇತಿಹಾಸದಲ್ಲಿ ಮೊದಲ ಬಾರಿಗೆ ಪವನ ಶಕ್ತಿ ಸಿಗುತ್ತಿದ್ದು, ಸಿನಿಮಾ ತಂಡದ ತಂತ್ರಜ್ಞರಿಗೆ ಬಹಳ ಖುಷಿಯನ್ನು ತಂದುಕೊಟ್ಟಿದೆ. ನಿರ್ದೇಶನ, ಸಂಭಾಷಣೆ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ತಾರಾಳಬಾಲು ವಿಜೇತ್ ಹೊತ್ತಿದ್ದರೆ, ಛಾಯಾಗ್ರಹಣವನ್ನು ದೀಪಿತ್ ರವರು ವಹಿಸಿಕೊಂಡಿದ್ದಾರೆ.
        ಈಗಾಗಲೇ  ಅರ್ಧದಷ್ಟು ಕಲಾವಿದರ ಆಯ್ಕೆಯಾಗಿದ್ದು, ಇನ್ನು ಅರ್ಧದಷ್ಟು ಬಾಕಿಯಿದೆ. ಅತಿ ಶೀಘ್ರದಲ್ಲಿಯೇ ಮುಹೂರ್ತ ಸಮಾರಂಭವನ್ನು ಏರ್ಪಡಿಸಲಾಗುವುದು ಎಂದು ತಿಳಿಸಲು ಇಚ್ಛಿಸುತ್ತೇವೆ. ಆದ್ದರಿಂದ ಹೊಸಬರ ಈ ತಂಡಕ್ಕೆ ನಿಮ್ಮೆಲ್ಲರ ಆಶೀರ್ವಾದ, ಪ್ರೋತ್ಸಹ, ಮತ್ತು ಬೆಂಬಲಿಸಲು ಕೋರಲಾಗಿದೆ.
ಉಳಿಕೆ ಇರುವ ಕಲಾವಿದರ ಆಯ್ಕೆ ನಡೆಯಿತ್ತಿದ್ದು ಆಸಕ್ತಿ   ಇರುವವರು 9964979899 ಅನ್ನು ಸಂರ್ಕಿಸಲು ಕೋರಲಾಗಿದೆ.

Monday, 23 January 2017

Kambalakke Bembala



ಎಲ್ಲರಿಗು ನಮಸ್ಕಾರ,

ನಾನು ನಿನ್ನೆ ಹೇಳಿದಂತೆ ಕಂಬಳದ ವಿರುದ್ಧ ಇಂದು ಸಹಿ ಸಂಗ್ರಹ ಆಂದೋಲನವನ್ನು ಹಮೀಕೊಳ್ಳಗಾಗಿತ್ತು ತುಮಕೂರು ನಗರದ ಜನತೆ ತುಂಬಾ ಸಹಕರಿಸಿದರು ಅದರ ಒಂದು ಫೋಟೋ ಮತ್ತು ವಿಡಿಯೋ ವನ್ನು ಶೇರ್ ಮಾಡುತ್ತಿದ್ದೇನೆ, ನಮ್ಮ ಈ ಹೋರಾಟಕ್ಕೆ ನಿಮ್ಮ ಬೆಂಬಲವನ್ನು ವ್ಯಕ್ತಪಡಿಸಿ ಏಕೆಂದರೆ ಇದು ಕನ್ನಡಿಗರ ಒಗ್ಗಟ್ಟಿನ ಪ್ರಶ್ನೆ.ಇದಕ್ಕೆ ನಮ್ಮ ಜಿಲ್ಲೆಯ ಎಲ್ಲ ದೃಶ್ಯ ಮಾದ್ಯಮದವರು ಸಹಕರಿಸಿದರು. ಸುಮಾರು ೧೦೦೦ ಕ್ಕೂ ಹೆಚ್ಚು ಸಹಿ ಸಂಗ್ರಹಿಸಿ ಪ್ರಧಾನಿ ಯವರಿಗೆ ಕಳುಹಿಸಲಾಗುವುದು. ಜೈ ಕರ್ನಾಟಕ.


Sunday, 22 January 2017

First Poster

ಎಲ್ಲರಿಗೂ ನಮಸ್ಕಾರ,


ಇಷ್ಟುದಿನ ಸಿನಿಮಾದ ಪ್ರಮೋಷನ್ ಗಳಲ್ಲಿ ಮಾತ್ರ ತೊಡಗಿಸಿಕೊಳ್ಳುತ್ತಿದ್ದ ನಾವು ಇನ್ನು ಮುಂದೆ ಹೊಸ ಪ್ರತಿಭೆಗಳನ್ನು ಪ್ರೋತ್ಸಹಿಸುವ ಸಲುವಾಗಿ ಕೆಲವು ಕಿರು ಚಿತ್ರಗಳ ನಿರ್ಮಾಣದಲ್ಲಿ ತೊಡಗಿಕೊಳ್ಳಲಿದ್ದೇವೆ. ನಮ್ಮ ಮೊದಲ ಕಿರು ಚಿತ್ರದ ಸಿಂಪಲ್ ಪೋಸ್ಟರ್ ಒಂದನ್ನು ಬಿಡುಗಡೆಗೊಳಿಸುತ್ತಿದ್ದೇವೆ. ದಯವಿಟ್ಟು ಶೇರ್ ಮಾಡಿ ಸಪೋರ್ಟ್ ಮಾಡಿ. ನಮ್ಮ ಈ ಒಂದು ಸಣ್ಣ ಪ್ರಯತ್ನಕ್ಕೆ ಹರಸಿ, ಹಾರೈಸಿ, ಆಶೀರ್ವದಿಸಿ. ಜೈ ಕರ್ನಾಟಕ ಮಾತೆ.

Saturday, 21 January 2017

ಕಂಬಳವನ್ನು ಬೆಂಬಲಿಸಿ

ನೋಡಿ ನಾವು ಕನ್ನಡಿಗರು ಬೇರೆಯವರನ್ನೇ  ನೋಡಿ ಕಲಿಯೋದು ಬಹಳಷ್ಟಿದೆ ನಾವು ತಮಿಳುನಾಡು ಜನರನ್ನು ನೋಡಿ ಕಲಿಯಬೇಕು ಯಾಕೆಂದರೆ ಅವರ ಒಗ್ಗಟ್ಟು ಹೇಗಿದೆ ಅಂತ, ನಾನು ನಿಜ ಹೇಳ್ತಿದ್ದೀನಿ, ನಮ್ಮಲ್ಲಿ ಎಷ್ಟೋ ಹಳ್ಳಿ ಗಾಡಿನ ಕಡೆ ಕಂಬಳ ಸೇರಿದಂತೆ ಇನ್ನು ಮುಂತಾದ ಅನೇಕ ಕ್ರೀಡೆಗಳಿವೆ ಆದರೆ ನಾವು ಅದುನ್ನ ಬೆಳೆಸುತ್ತಿಲ್ಲ. ಕಾರಣ ಹಲಾವಾರು ಇರಬಹುದು. ನಮ್ಮಲ್ಲಿರುವ ಕನ್ನಡ ಪರ ಹೋರಾಟಗಾರರು ಸುಮ್ಮನೆ ಫೋಸು ಕೊಡತ್ತಾರೆ ಅಷ್ಟೇ. ನಮಗೆ ಬಹಳ ದಿನಗಳಿಂದಲೂ ಅನ್ಯಾಯ ಆಗ್ತಾನೆ ಇದೆ ಅದು ನೀರು ಆಗಿರಬಹುದು, ಸಿನೆಮಾ ಆಗಿರಬಹುದು. ಕಾರಣ ಒಗ್ಗಟ್ಟು ಇಲ್ಲದೆ ಇರುವುದು. ಕೇವಲ 40 ಜನರಿಂದ ಆರಂಭವಾದ ಒಂದು ಚಳುವಳಿ 3 ದಿನದಲ್ಲಿ ಸುಮಾರು ಒಂದು ಅಂದಾಜಿನ ಪ್ರಕಾರ 10 ಲಕ್ಷಕ್ಕೂ ಮೀರಿ ಆ ವಿದ್ಯಾರ್ಥಿಗಳಿಗೆ ಸಪೋರ್ಟ್ ಮಾಡಿ ಮತ್ತೆ ಜಲ್ಲಿಕಟ್ಟು ಆರಂಭವಾಯ್ತು. ನಮ್ಮ ಪ್ರಧಾನಿ ಯವರೇ ಆ ಜನ ಸಮೂಹ ನೋಡಿ ಹೆದರಿ ಸುಗ್ರೀವಾಜ್ಞೆ ಹೊರಡಿಸಿಬಿಟ್ಟರು. ಕಳೆದ ೪೦ ದಿನಗಳಲ್ಲಿ 4  ಬಾರಿ ತಮಿಳುನಾಡು ಮುಖ್ಯಮಂತ್ರಿ ಸೆಲ್ವಂ ಅವರು ಭೇಟಿಮಾಡಿದ್ದಾರೆ. ಅಲ್ಲಿ ಬಿಜೆಪಿ ಗೆದ್ದಿರೋದು ಒಂದೇ ಸೀಟು. ಆದರೆ ನಮ್ಮಲ್ಲಿ 21 ಸೀಟು ಗೆದ್ರೂನು ಯಾವುದೇ ಪ್ರಯೋಜನ ಆಗುತಿಲ್ಲ. ನಾನು ನಿಮ್ಮ ಹತ್ತಿರ ಬೇಡಿಕೊಳ್ಳುತ್ತಿದ್ದೀನಿ.ದಯವಿಟ್ಟು ಇನ್ನಾದ್ರೂ ಎಚ್ಚೆತ್ತುಕೊಳ್ಳಿ ನನ್ನ ಆತ್ಮೀಯ ಕನ್ನಡಿಗರೇ, ಆಗುತ್ತಿರುವ ಅನ್ಯಾಯ ವಿರುದ್ಧ ಒಗ್ಗಟ್ಟಾಗಿ ನಾನಂತೂ ನಾಳೆ ಇಂದಲೇ ಹೋರಾಟ ಪ್ರಾರಂಭಿಸುತ್ತೆನೆ.  ನೀವು....?

Friday, 20 January 2017

ಎಲ್ಲರಿಗು ನಮಸ್ಕಾರ,

ಇಷ್ಟು ದಿನ ಪ್ರಮೋಷನ್ ನಲ್ಲಿ ತೊಡಗಿದ್ದ ನಿಮ್ಮ ಸಿನಿಟಾಲೆಂಟ್ರ್ಸ್.ಕಂ ಸಂಸ್ಥೆಯ ಅಶೋಕ ಇನ್ನು ಮುಂದೆ ಹೊಸಬರಿಗೆ ಅನುಕೂಲ ಆಗಲಿ ಅಂತ ಸಂಬಂಧಪಟ್ಟ ವ್ಯಕ್ತಿಗೆ ಅಥವಾ ಚಿತ್ರದ ಬಗ್ಗೆ ನನ್ನದೇ ಆದ ಶೈಲಿಯಲ್ಲಿ  ವಿಮರ್ಶೆ ಬರೆಯಲು ನಿರ್ಧರಿಸಿದ್ದೇನೆ. ದಯವಿಟ್ಟು ನನ್ನ ಬ್ಲಾಗ್ ಲಿಂಕ್ ಅಡ್ರೆಸ್ ಅನ್ನು ಶೇರ್ ಮಾಡ್ತಿದ್ದೀನಿ ದಯವಿಟ್ಟು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಳ್ಳಿ ಎಂದು ಕೇಳಿಕೊಳ್ಳುತ್ತಿದ್ದೇನೆ. ಏನಾದ್ರು ಬೈಯ್ಯಬೇಕು ಅಂತ ಅನ್ಸಿದ್ರು ಅಲ್ಲೇ ಕಾಮೆಂಟ್ಸ್ ಜಾಗದಲ್ಲಿ ಬಯ್ಯಬಹುದು ಯಾವುದೇ ಬೇಜಾರಂತೂ ಮಾಡಿಕೊಳ್ಳುವುದಿಲ್ಲ. ನಿಮ್ಮ ಒಂದೊಂದು ಅಭಿಪ್ರಾಯವನ್ನು ಸ್ವೀಕರಿಸಿ ಮುಂದೆ ನನ್ನ ತಪ್ಪನ್ನು ತಿದ್ದಿಕೊಳ್ಳುವುದರ ಮೂಲಕ ನನ್ನ ಲೇಖನವನ್ನು ಉತ್ತಮಪಡಿಸಿಕೊಳ್ಳುತ್ತೇನೆ.

http://ashokacinetalenters.blogspot.in/

ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಮ್ಮ ಮೊಬೈಲ್ ನಂಬರ್ ಆದ 9964979899 ಕಳುಹಿಸಲು ಕೋರಿದೆ.

One man show in Darpana alias Junior Crazy star

ಸಾಮನ್ಯವಾಗಿ ಒಂದು ಸಿನಿಮಾದಲ್ಲಿ ಒಂದು, ಎರಡು ಅಥವಾ ಮೂರೂ ಜವಾಬ್ದಾರಿಗಳನ್ನು ನಿಭಾಯಿಸುವುದನ್ನು ನೋಡಿದ್ದೇವೆ. ಉದಾಹರಣೆಗೆ ಬೇಕಾದರೆ ಶೋ ಮ್ಯಾನ್ ಎಂದೇ ಪರಿಚಿತರಾಗಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ಈ ಎಲ್ಲವನ್ನು ನಿಭಾಯಿಸುತ್ತಿದ್ದರು ಆದರೆ ಕೆಲ ವರ್ಷಗಳಿಂದ ಆ ಜಾಗ ಚಂದನವನದಲ್ಲಿ ಖಾಲಿ ಆಗಿತ್ತು ಆದರೆ ಅದನ್ನು ಈಗ  ತಮ್ಮ ಪ್ರಚಂಡ ಸಂಗೀತದಿಂದಲೇ ಕಳೆದ ಕೆಲ ವರ್ಷಗಳಿಂದ ತಮ್ಮದೇ ಆದ ಛಾಪುಮೂಡಿಸುತ್ತಿರುವ ಅಪ್ಪಟ ಕನ್ನಡ ಪ್ರತಿಭೆ ಕಾರ್ತಿಕ್ ವೆಂಕಟೇಶ್ ತುಂಬುವ ಸೂಚನೆ ನೀಡಿದ್ದಾರೆ. ಅದು ಹೇಗಪ್ಪಾ ಅಂದರೆ "ದರ್ಪಣ" ಚಿತ್ರದ ಮೂಲಕ ಕಥೆ, ಚಿತ್ರಕಥೆ, ನಿರ್ಮಾಣ, ನಿರ್ದೇಶನ, ಸಂಗೀತ  ನಿರ್ದೇಶನ, ಸಂಭಾಷಣೆ , ಕಲೆ, ಸಾಹಿತ್ಯ ಇನ್ನು ಅನೇಕ.
ಕೆಲ ದಿನಗಳ ಹಿಂದಷ್ಟೇ ದರ್ಪಣ ಚಿತ್ರದ ಒಂದು ಟೀಸರ್ ರಿಲೀಸ್ ಮಾಡಿದ್ದಾರೆ ಅದನ್ನು ಆ ಒಂದು ಟೀಸರ್ ನ ನೋಡಿ ಎಲ್ಲರು ಸಪೋರ್ಟ್ ಮಾಡಿ ಅಂತ ಹೇಳುತಾ ಜೂನಿಯರ್ ಕ್ರೇಜಿ ಸ್ಟಾರ್ ಮತ್ತು ಆ ತಂಡಕ್ಕೆ ಶುಭಾಶಯಗಳು.
https://youtu.be/Gx1cazkowK8

Thursday, 19 January 2017

ರೂಪದರ್ಶಿಯಿಂದ ಚಂದನ ವನದ ಮುಖ್ಯ ವಾಹಿನಿಗೆ



ಹೆಸರು ಇಮ್ರಾನ್ ಊರು ಬೆಂಗಳೂರು 6.2 ಅಡಿ ಎತ್ತರದ ಈ ಹುಡುಗ ಬಹಳ ದಿನಗಳಿಂದ
ಮಾಡೆಲಿಂಗ್ನಲ್ಲಿ ಬ್ಯುಸಿ ಇದ್ದರು. ಅಲ್ಲಿ ಇಲ್ಲಿ ನಡೆಯುತ್ತಿದ್ದ ಆಡಿಷನ್ ಗೆ ಹೋಗಿ
ಬರುತ್ತಿದ್ದರು. ಆದರೆ ಎಲ್ಲೂ ಅವಕಾಶನೇ ಸಿಕ್ಕಿರಲಿಲ್ಲ. ಆದರೂ ಪಟ್ಟು ಬಿಡದ ಇಮ್ರಾನ್
ಜೂನಿಯರ್ ಆರ್ಟಿಸ್ಟ್ ಆಗಿ ರಣ ವಿಕ್ರಮ, ಮಿಸ್ಸೆಸ್ ಅಂಡ್ ಮಿಸ್ಸೆಸ್ ರಾಮಾಚಾರಿ,
ಬೆಂಗಳೂರು ೨೩, ಗೂಗ್ಲಿ, ಸಿದ್ದಾರ್ಥ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಆದರೆ ಎಷ್ಟೋ
ಅವಮಾನ ಅನುಭವಿಸಿದ್ದಾರೆ. ನೊಂದಿದ್ದಾರೆ. ಆದರೆ ಕಡೆಗೂ ದೇವರು ಇವರ ಕೈ ಬಿಡಲಿಲ್ಲ
ಕಳೆದ ತಿಂಗಳು ನಡೆದ ಸೌತ್ ಇಂಡಿಯನ್ ಟಾಪ್ ಮಾಡೆಲ್ ಹಂಟ್ ನಲ್ಲಿ ಗೆದ್ದು ತಾನು ಏನು
ತ್ನ್ನ ಸಾಮರ್ಥ್ಯ ಏನು ಎನ್ನುವುದನ್ನು  ತೋರಿಸಿದ್ದಾರೆ. ಈಗ ಬಹಳ ಕಡೆಯಿಂದ ಅವಕಾಶಗಳು
ಬರುತ್ತಾ ಇರೋದು ಖುಷಿ ತರಿಸಿದೆ ಎನ್ನುತ್ತಾರೆ ಇಮ್ರಾನ್. ಯಾವುದೇ ಹಿನ್ನಲೆ ಇರದ
ಇವರು ಈ ಮಟ್ಟಕ್ಕೆ ಬೆಳೆದಿದ್ದಾರೆ ಸೌತ್ ಇಂಡಿಯಾ ತನ್ನತ್ತ ಬೆರಗಾಗುವ ಹಾಗೆ
ಮಾಡಿದ್ದಾರೆ.  ಅತಿ ಶೀಘ್ರದಲ್ಲೇ ಒಂದು ಒಳ್ಳೆ ಅವಕಾಶದೊಂದಿಗೆ ನಿಮ್ಮ ಮುಂದೆ
ಬರುತಿದ್ದಾರೆ ಇಮ್ರಾನ್.
ಇವರ ಈ ಒಂದು ಪ್ರಯತ್ನಕ್ಕೆ  ಹಾಟ್ಸ್ ಆಫ್ ಹೇಳುವುದರ ಮೂಲಕ ಅವರ ಸಿನಿ ಜರ್ನಿಗೆ ವಿಶ್ ಮಾಡೋಣ.

Kannada cinemada sthithi gathi

 ⁠⁠⁠ಎಲ್ಲರಿಗು ನಮಸ್ಕಾರ ಶುಭೋದಯ, ನಿಮ್ಮ ೫ ನಿಮಿಷ ಈ ಒಂದು ಆರ್ಟಿಕಲ್ ಮೇಲೆ ಗಮನ ಹರಿಸಿ ಮತ್ತು ಶೇರ್ ಮಾಡಿ. ಕಳೆದ 7 ತಿಂಗಳಿನಿಂದ ನಮ್ಮ ಸಂಸ್ಥೆಯು ಕೆಲ ಮಾನದಂಡಗಳ ಆಧಾರದಲ್ಲಿಟ್ಟುಕೊಂಡು ನಡೆಸಿದ ಅಧ್ಯಯನದ ಕೆಲವು ಸಾರಾಂಶವನ್ನು ನಿಮ್ಮ ಮುಂದೆ ಇಡಲು ಇಚ್ಛಿಸುತ್ತೆವೆ. ಬೀದರ್ನಿಂದ ಚಾಮರಾಜನಗರ , ರಾಯಚೂರಿನಿಂದ ಮಂಗಳೂರು ವರೆಗೆ ಸುಮಾರು ೨೮ ಜಿಲ್ಲೆಯ. ೧೩೦ ತಾಲೂಕಿನ ೧೫೦ ಹೋಬಳಿಯ ಜನರು ಮತ್ತು ೧೯೭೫ ರಿಂದ ೨೦೧೫ ರವರಿಗೆ ಸಿನಿಮಾ ರಂಗದಲ್ಲಿದ್ದ ಕಲಾವಿದರು, ತಂತ್ರಜ್ಞರು, ಮತ್ತು ನಿರ್ಮಾಪಕರು , ನಿರ್ದೇಶಕರು ಸುಮಾರು ೩೦೦ಕ್ಕೂ ಅಧಿಕ ಜನರನ್ನು ಸಂಪರ್ಕಿಸಲಾಯಿತು. ನಮ್ಮ ತಂಡದ ಸದಸ್ಯರು ಸುಮಾರು ೨೦೦೦ ಕಿಲೋಮೀಟರ್ಗಳ ಜರ್ನಿ ಮಾಡಿದ್ದಾರೆ ಈ ಕೆಳಕಂಡ ಮಾನದಂಡಗಳು ಇಡುತ್ತಿದ್ದೇವೆ. 
 1. ವರ್ಷಕ್ಕೆ ೧೫೦ಕ್ಕೂ ಅಧಿಕ ಸಿನಿಮಾ ಬಿಡುಗಡೆಗೊಳ್ಳುತ್ತವೆ ಆದರೆ ಬಂಡವಾಳ ಹಿಂತಿರುಗಿಸುವುದು ೧/೪ ಭಾಗ ಮಾತ್ರ ಅದು ಏಕೆ..? 
2. ಕೋಲಾರದಲ್ಲಿರುವವರು ಹೆಚ್ಚಾಗಿ ತೆಲುಗು ಸಿನಿಮಾ ಏಕೆ ನೋಡುತಾರೆ..?, ಚಾಮರಾಜ ನಾಗದಲ್ಲಿರುವವರು ತಮಿಳು ಸಿನಿಮಾಗಳನ್ನು ಏಕೆ ನೋಡುತಾರೆ..? ಮಂಗಳೂರಿನಲ್ಲಿ ತಮಿಳು ಸಿನಿಮಾ ಗಳು ಏಕೆ ರಾರಾಜಿಸುತವೆ, ಬೀದರ್ನಲ್ಲಿರುವವರು ಏಕೆ ಹಿಂದಿ ಸಿನಿಮಾಗಳನ್ನು ಏಕೆ ನೋಡುತಾರೆ..? ಇವರೆಲ್ಲರೂ ಕನ್ನಡ ಸಿನಿಮಾ ನೋಡಲು ಏನು ಮಾಡಬೇಕು...?
 3. ಕನ್ನಡ ಸಿನಿಮಾಗಳು ಗೆಲ್ಲದಿದ್ದರು ಹಾಕಿದ ಬಂಡವಾಳ ಹೇಗೆ ಬರಬೇಕು..? 
4. ಯಾವ ಚಿತ್ರವನ್ನು ಎಲ್ಲಿ ಪ್ರದರ್ಶಿಸಿದರೆ ಉತಮ ಪ್ರತಿಕ್ರಿಯೆ ದೊರೆಯುತ್ತದೆ ..?
 5. ಕನ್ನಡಕ್ಕೆ ಇರುವ ಅಡೆತಡೆಗಳೇನು ..? ಆ ಅಡೆತಡೆಗಳನ್ನು ಹೇಗೆ ನಿವಾರಿಸಿ ಮುಂದೆಸಾಗಬೇಕು?
 6. ಸ್ಟಾರ್ ಕ್ಯಾಸ್ಟ್ ಇಂಪಾರ್ಟೆಂಟ್ ಅಥವಾ ಕಂಟೆಂಟ್ ಇಂಪಾರ್ಟೆಂಟ್..? 
7. ಯಾವ ಜಿಲ್ಲೆಯವರು ಜನರು ಯಾವದನ್ನು ಹೆಚ್ಚಾಗಿ ಇಷ್ಟ ಪಡುತಾರೆ..?
8. ಹೊಸಬರ ಚಿತ್ರ ಎದುರು ಹಳಬರ ಚಿತ್ರ ಬಂದರೆ ಅದನ್ನು ಹೇಗೆ ಕ್ರ್ಯಾಕ್ ಮಾಡಬೇಕು ..? ಉದಾಹರಣೆ : ಹ್ಯಾಪಿ ಮ್ಯಾರೀಡ್ ಲೈಫ್ ಒಳ್ಳೆ ಸಿನಿಮಾ ಆದರೆ ಕರೆಕ್ಟ್ ಪ್ಲಾನಿಂಗ್ ಇಲ್ಲದೆ ಸಿನಿಮಾ ರಿಲೀಸ್ಓ ಮಾಡಿದರು ಆದರೆ ಓವರ್ ಆಲ್ ಸಿನಿಮಾ ಸೋತಿದೆ ಅಂತಾನೆ ಹೇಳಬಹುದು ಆದರೆ ಡೈರೆಕ್ಟರ್ ಆನಂದ್ ವರ್ತರ್ ಅವರನ್ನು ಭೇಟಿ ಮಾಡಿದಾಗ ಬಹಳ ಸಂಕಟ ಆಯಿತು. ಆದರೆ ಟೈಮ್ ಮೀರಿಹೋಗಿದ್ದರಿಂದ ಆ ಸಿನಿಮಾ ದವರಿಗೆ ಏನು ಮಾಡಲಿಲ್ಲ ಅನ್ನೋದು ಸ್ವಲ್ಪ ನಮ್ಮ ಮೇಲೇನೆ ನಮಗೆ ಬೇಜಾರಿದೆ.
 9. ಎಲ್ಲದಕ್ಕಿಂತ ಮುಖ್ಯವಾಗಿ ಮಾಧ್ಯಮಗಳು ಏನ್ ಮಾಡ್ತಿವೆ ಅನ್ನೋದು ಕೂಡ ಗಮನಕ್ಕೆ ಬಂದಿದೆ..? ಮಾಧ್ಯಮದವರ ಸಪೋರ್ಟ್ ಇಲ್ಲ ಅಂದ್ರು ಸಿನಿಮಾ ಹೇಗೆ ಗೆಲಿಸ್ಕೊಬೇಕು ಅನ್ನೋದು ಗೊತ್ತಿದೆ. 
10. ಕೆಲವರು ಕಿರುತೆರೆಯಲ್ಲಿ ಫೇಮಸ್ ಆಗಿರುವವರು ಸಿನಿಮಾ ಮಾಡುದ್ರೆ ಗೆಲ್ಲಕ್ಕೆ ಯಾವ ತಂತ್ರ ಉಪಯೋಗಿಸಬೇಕು.. ? 
11. ಸೋಶಿಯಲ್ ಮೀಡಿಯಾ ಇಲ್ಲ ಅಂದ್ರು ಹಿಂದಿನ ಕಾಲದ ಸಿನಿಮಾ ಹೇಗೆ ಗೆಲ್ಲುತ್ತಿತು ಅನೋದು ಕ್ರ್ಯಾಕ್ ಮಾಡಿದೀವಿ.. 
12. ಯಾವುದೇ ಹೊಸ ಪ್ರೊಡ್ಯೂಸರ್ ೧೦೦ ಕ್ಕೆ ೯೯ ರೂಪಾಯಿ ಬಂದರೂನು ಇನ್ನೊಂದು ಸಿನಿಮಾ ಮಾಡೋದಕ್ಕೆ ಹಿಂದೇಟು ಹಾಕುತಾರೆ ಯಾಕೆಂದ್ರೆ ಯಾರು ಲಾಸ್ ಮಾಡಿಕೊಳ್ಳಕೆ ಇಷ್ಟ ಪಡೋದಿಲ್ವ ಅಲ್ವ ಫ್ರೆಂಡ್ಸ್ ..?

 ಇನ್ನು ಕೆಲ ಮಾನದಂಡಗಳನ್ನು ಇಟ್ಟುಕೊಂಡು ಅಧ್ಯಯನ ನಡೆದಿದೆ. ಪೂರಕವಾದಂತಹ ಅಂಕಿ ಅಂಶಗಳು ನಮ್ಮ ಬಳಿ ಇವೆ. ಆದ್ರೆ ಒಂದಂತೂ ಹೇಳೋಕ್ಕೆ ಇಷ್ಟ ಪಡ್ತಿವಿ ಯಾರೇ ಸಿನಿಮಾ ಮಾಡಲಿ ಆ ಸಿನಿಮಾ ಗೆದ್ದಿದೆ ಅಂದರೆ ಅದು ಗಡಿ ಭಾಗದಲ್ಲಿ ಚೆನ್ನಾಗಿ ಉತ್ತಮ ಪ್ರತಿಕ್ರಿಯೆ ಬರ್ತಿದೆ ಅಂದರೇನೇ ಮಾತ್ರ. ಅದಕ್ಕೆ ನಮ್ಮ ಹಿಂದಿನ ಒಂದು ಚಿಕ್ಕ ಆರ್ಟಿಕಲ್ ನಲ್ಲಿ ಹೇಳಿದು ಯಾರ ಸಪೋರ್ಟ್ ಇಲ್ಲ ಅಂದ್ರು ಸಿನಿಮಾ ಹೇಗೆ ಗೆಲ್ಲಿಸಿಕೊಳ್ಳಬೇಕು ಅನ್ನೋದು ಸಿನಿಟಾಲೆಂಟ್ಸ್.ಕಾಂ ಸಂಸ್ಥೆಗೆ ಗೊತಿದೆ ಅಂತ. ಕೊನೆಗೆ ಒಂದಂತೂ ಸತ್ಯ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಇಂತಿ, ನಿಮ್ಮ ಟೀಮ್ ಸಿನಿಟಾಲೆಂಟ್ರ್ಸ್.ಕಾಂ ಯಾವುದೇ ತರಹದ ನಿಮ್ಮ ಕಾಮೆಂಟ್ಗಳನ್ನು ನಮ್ಮ ಸಂಸ್ಥೆಯ ನಂಬರ್ ಆದ 9964979899 ಗೆ ಕಳುಹಿಸಲು ಕೋರಿದೆ.
⁠⁠⁠⁠⁠⁠⁠⁠⁠