Saturday, 21 January 2017

ಕಂಬಳವನ್ನು ಬೆಂಬಲಿಸಿ

ನೋಡಿ ನಾವು ಕನ್ನಡಿಗರು ಬೇರೆಯವರನ್ನೇ  ನೋಡಿ ಕಲಿಯೋದು ಬಹಳಷ್ಟಿದೆ ನಾವು ತಮಿಳುನಾಡು ಜನರನ್ನು ನೋಡಿ ಕಲಿಯಬೇಕು ಯಾಕೆಂದರೆ ಅವರ ಒಗ್ಗಟ್ಟು ಹೇಗಿದೆ ಅಂತ, ನಾನು ನಿಜ ಹೇಳ್ತಿದ್ದೀನಿ, ನಮ್ಮಲ್ಲಿ ಎಷ್ಟೋ ಹಳ್ಳಿ ಗಾಡಿನ ಕಡೆ ಕಂಬಳ ಸೇರಿದಂತೆ ಇನ್ನು ಮುಂತಾದ ಅನೇಕ ಕ್ರೀಡೆಗಳಿವೆ ಆದರೆ ನಾವು ಅದುನ್ನ ಬೆಳೆಸುತ್ತಿಲ್ಲ. ಕಾರಣ ಹಲಾವಾರು ಇರಬಹುದು. ನಮ್ಮಲ್ಲಿರುವ ಕನ್ನಡ ಪರ ಹೋರಾಟಗಾರರು ಸುಮ್ಮನೆ ಫೋಸು ಕೊಡತ್ತಾರೆ ಅಷ್ಟೇ. ನಮಗೆ ಬಹಳ ದಿನಗಳಿಂದಲೂ ಅನ್ಯಾಯ ಆಗ್ತಾನೆ ಇದೆ ಅದು ನೀರು ಆಗಿರಬಹುದು, ಸಿನೆಮಾ ಆಗಿರಬಹುದು. ಕಾರಣ ಒಗ್ಗಟ್ಟು ಇಲ್ಲದೆ ಇರುವುದು. ಕೇವಲ 40 ಜನರಿಂದ ಆರಂಭವಾದ ಒಂದು ಚಳುವಳಿ 3 ದಿನದಲ್ಲಿ ಸುಮಾರು ಒಂದು ಅಂದಾಜಿನ ಪ್ರಕಾರ 10 ಲಕ್ಷಕ್ಕೂ ಮೀರಿ ಆ ವಿದ್ಯಾರ್ಥಿಗಳಿಗೆ ಸಪೋರ್ಟ್ ಮಾಡಿ ಮತ್ತೆ ಜಲ್ಲಿಕಟ್ಟು ಆರಂಭವಾಯ್ತು. ನಮ್ಮ ಪ್ರಧಾನಿ ಯವರೇ ಆ ಜನ ಸಮೂಹ ನೋಡಿ ಹೆದರಿ ಸುಗ್ರೀವಾಜ್ಞೆ ಹೊರಡಿಸಿಬಿಟ್ಟರು. ಕಳೆದ ೪೦ ದಿನಗಳಲ್ಲಿ 4  ಬಾರಿ ತಮಿಳುನಾಡು ಮುಖ್ಯಮಂತ್ರಿ ಸೆಲ್ವಂ ಅವರು ಭೇಟಿಮಾಡಿದ್ದಾರೆ. ಅಲ್ಲಿ ಬಿಜೆಪಿ ಗೆದ್ದಿರೋದು ಒಂದೇ ಸೀಟು. ಆದರೆ ನಮ್ಮಲ್ಲಿ 21 ಸೀಟು ಗೆದ್ರೂನು ಯಾವುದೇ ಪ್ರಯೋಜನ ಆಗುತಿಲ್ಲ. ನಾನು ನಿಮ್ಮ ಹತ್ತಿರ ಬೇಡಿಕೊಳ್ಳುತ್ತಿದ್ದೀನಿ.ದಯವಿಟ್ಟು ಇನ್ನಾದ್ರೂ ಎಚ್ಚೆತ್ತುಕೊಳ್ಳಿ ನನ್ನ ಆತ್ಮೀಯ ಕನ್ನಡಿಗರೇ, ಆಗುತ್ತಿರುವ ಅನ್ಯಾಯ ವಿರುದ್ಧ ಒಗ್ಗಟ್ಟಾಗಿ ನಾನಂತೂ ನಾಳೆ ಇಂದಲೇ ಹೋರಾಟ ಪ್ರಾರಂಭಿಸುತ್ತೆನೆ.  ನೀವು....?

No comments:

Post a Comment