Tuesday, 31 January 2017

auto driver inda Style Raja na Varege

ಎಲ್ಲರಿಗೂ ನಮಸ್ಕಾರ,

ನೋಡೋಕ್ಕೆ ರಾಕಿಂಗ್ ಸ್ಟಾರ್ ಯಶ್ ತರಹ ಕಣೋ ಈ ಹುಡುಗನ ಹೆಸರು ಗಿರೀಶ್ ಮೂಲತಃ ತುಮಕೂರಿನ ಕುಣಿಗಲ್ ತಾಲೂಕಿನ ಹುಲಿಯುರಿದುರ್ಗವರು ತಂದೆ ಮತ್ತು ತಾಯಿ ಕೃಷಿಕರು, ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಆಟೋ ಡ್ರೈವರ್ ಕೆಲಸ ಮಾಡ್ತಿರುತ್ತಾರೆ, ಜೊತೆ ಜೊತೆಗೆ ಆಕ್ಟಿಂಗ್ ಕಡೆ ಸ್ವಲ್ಪ ಒಲವು ಜಾಸ್ತಿ ಇರುತ್ತೆ ಅಲ್ಲಿ ಇಲ್ಲಿ ಆಡಿಷನ್ ಅಟೆಂಡ್ ಮಾಡ್ಕೊಂಡು ಹೇಗೋ ಕಾಲ ಕಳೆಯುತ್ತಿರುತಾರೆ. ನೋಡೋಕ್ಕೆ ಥೇಟ್ ಯಶ್ ತರೇನೇ ಇದ್ರಲ್ವಾ, ಇದನ್ನು ಒಬ್ಬರು ಪ್ರೊಡ್ಯೂಸರ್ ಇವರನ್ನು ನೋಡಿ  "ಸ್ಟೈಲ್ ರಾಜ"  ಸಿನೆಮಾಗೆ ಹೀರೋ ಮಾಡುತ್ತಾರೆ, ಸಿನಿಮಾ ಸ್ಟಾರ್ಟ್ ಆಗಿ ಶೂಟಿಂಗ್ ಮುಗಿದು ದಿನಾಂಕ 3-2-2017 ಶುಕ್ರವಾರ ಸಿನಿಮಾ ರಿಲೀಸ್ ಆಗ್ತ್ತಿದೆ. ಬಹಳ ಕಷ್ಟ ಪಟ್ಟು ಮೇಲೆ ಬಂದಿರುವ ಆ ಆಟೋ ಡ್ರೈವರ್ ಅನ್ನು ಬೆಳೆಸೋ ಹೊಣೆ ನಮ್ಮದಾಗಿದೆ ಫ್ರೆಂಡ್ಸ್ ಜೊತೆಗೆ ಆರ್ಟಿಸ್ಟ್ ಆಗಬೇಕು ಅನ್ನುವವರಿಗೆ ಇವರು ಸ್ಪೂರ್ತಿ ಕೂಡ ಆಗಿದ್ದರೆ.  ದಯವಿಟ್ಟು ಸಿನಿಮಾ ನೋಡಿ ಬೆಳೆಸಿ, ಹರಸಿ, ಹಾರೈಸಿ.



No comments:

Post a Comment