ಹೆಸರು ಇಮ್ರಾನ್ ಊರು ಬೆಂಗಳೂರು 6.2 ಅಡಿ ಎತ್ತರದ ಈ ಹುಡುಗ ಬಹಳ ದಿನಗಳಿಂದ
ಮಾಡೆಲಿಂಗ್ನಲ್ಲಿ ಬ್ಯುಸಿ ಇದ್ದರು. ಅಲ್ಲಿ ಇಲ್ಲಿ ನಡೆಯುತ್ತಿದ್ದ ಆಡಿಷನ್ ಗೆ ಹೋಗಿ
ಬರುತ್ತಿದ್ದರು. ಆದರೆ ಎಲ್ಲೂ ಅವಕಾಶನೇ ಸಿಕ್ಕಿರಲಿಲ್ಲ. ಆದರೂ ಪಟ್ಟು ಬಿಡದ ಇಮ್ರಾನ್
ಜೂನಿಯರ್ ಆರ್ಟಿಸ್ಟ್ ಆಗಿ ರಣ ವಿಕ್ರಮ, ಮಿಸ್ಸೆಸ್ ಅಂಡ್ ಮಿಸ್ಸೆಸ್ ರಾಮಾಚಾರಿ,
ಬೆಂಗಳೂರು ೨೩, ಗೂಗ್ಲಿ, ಸಿದ್ದಾರ್ಥ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಆದರೆ ಎಷ್ಟೋ
ಅವಮಾನ ಅನುಭವಿಸಿದ್ದಾರೆ. ನೊಂದಿದ್ದಾರೆ. ಆದರೆ ಕಡೆಗೂ ದೇವರು ಇವರ ಕೈ ಬಿಡಲಿಲ್ಲ
ಕಳೆದ ತಿಂಗಳು ನಡೆದ ಸೌತ್ ಇಂಡಿಯನ್ ಟಾಪ್ ಮಾಡೆಲ್ ಹಂಟ್ ನಲ್ಲಿ ಗೆದ್ದು ತಾನು ಏನು
ತ್ನ್ನ ಸಾಮರ್ಥ್ಯ ಏನು ಎನ್ನುವುದನ್ನು ತೋರಿಸಿದ್ದಾರೆ. ಈಗ ಬಹಳ ಕಡೆಯಿಂದ ಅವಕಾಶಗಳು
ಬರುತ್ತಾ ಇರೋದು ಖುಷಿ ತರಿಸಿದೆ ಎನ್ನುತ್ತಾರೆ ಇಮ್ರಾನ್. ಯಾವುದೇ ಹಿನ್ನಲೆ ಇರದ
ಇವರು ಈ ಮಟ್ಟಕ್ಕೆ ಬೆಳೆದಿದ್ದಾರೆ ಸೌತ್ ಇಂಡಿಯಾ ತನ್ನತ್ತ ಬೆರಗಾಗುವ ಹಾಗೆ
ಮಾಡಿದ್ದಾರೆ. ಅತಿ ಶೀಘ್ರದಲ್ಲೇ ಒಂದು ಒಳ್ಳೆ ಅವಕಾಶದೊಂದಿಗೆ ನಿಮ್ಮ ಮುಂದೆ
ಬರುತಿದ್ದಾರೆ ಇಮ್ರಾನ್.
ಇವರ ಈ ಒಂದು ಪ್ರಯತ್ನಕ್ಕೆ ಹಾಟ್ಸ್ ಆಫ್ ಹೇಳುವುದರ ಮೂಲಕ ಅವರ ಸಿನಿ ಜರ್ನಿಗೆ ವಿಶ್ ಮಾಡೋಣ.
No comments:
Post a Comment